Advertisement
ಮಾರುಕಟ್ಟೆಯ ಸಂಚಲನವಾಗಿರುವ ರೆಡ್ ಮಿ ನೋಟ್ 5 ಪ್ರೊ ಗೆ ನೇರ ಹಣಾಹಣಿ ನೀಡಲು ಈ ಫೋನ್ ತುದಿಗಾಲಲ್ಲಿ ನಿಂತಿದ್ದು ಅಕ್ಟೋಬರ್ 5 ರಂದು ಫ್ಲಿಪ್ಕಾರ್ಟ್’ಲ್ಲಿ ತನ್ನ ಮೊದಲ ಸೇಲ್ ಆರಂಭಿಸಲಿದೆ.
◆ 4ಎ ದ್ವಿ ಸಿಮ್ ಕಾರ್ಡ್
◆ 4 ಜಿಬಿ RAM | 64 ಜಿಬಿ ROM(ಮೈಕ್ರೊ SD ಕಾರ್ಡ್ ಮೂಲಕ 256 ಜಿಬಿ ವರೆಗೆ ವಿಸ್ತರಿಸಬಹುದು )
◆ 15.75 cm (6.2 ಇಂಚು) ಸಂಪೂರ್ಣ FHD + ನೋಟ್ಚ್ ಪರದೆ
◆ 16MP + 5MP ದ್ವಿ ಹಿಂಭಾಗದ ಕ್ಯಾಮೆರಾ | 12MP ಫ್ರಂಟ್ ಕ್ಯಾಮೆರಾ
◆ 5000 mAh ಬ್ಯಾಟರಿ + ಸಿ ಟೈಪ್ ಚಾರ್ಜರ್
◆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್
Related Articles
19 : 9 ಅನುಪಾತದ 15.75 cm (6.2 ಇಂಚು) ಸಂಪೂರ್ಣ FHD 1080 x 2264 ಪಿಕ್ಸೆಲ್ ರೆಸೋಲುಶನ್ ನೋಟ್ಚ್ ಪರದೆಯೊಂದಿಗೆ ಗೊರಿಲ್ಲಾ ಗ್ಲಾಸ್ ಹೊಂದಿದೆ.
Advertisement
ವೇಗ ಹಾಗೂ ಕಾರ್ಯಕ್ಷಮತೆ :4 GB RAM ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್ ಹಾಗೂ 1.8GHz ಎಂಟು ಕೋರ್ ಹೈ ಸ್ಪೀಡ್ ಪ್ರೊಸೆಸರ್’ನ ಮೂಲಕ ಫೋನಿನ ವೇಗ ಹಾಗೂ ಕಾರ್ಯಕ್ಷಮತೆಯಲ್ಲಿ ಉತ್ತಮವಾಗಿದೆ ಹಾಗೂ 64ಜಿಬಿ ROM ಹೊಂದಿದ್ದು ಮೈಕ್ರೊ ಖಈ ಕಾರ್ಡ್ ಮೂಲಕ 256 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ.
5000mAhನ ಬ್ಯಾಟರಿ ಹೊಂದಿದ್ದು ಸುಮಾರು 2 ದಿನಗಳ ಬಳಕೆ ಮಾಡಿಕೊಳ್ಳಬಹುದಾಗಿದೆ. ಸಿ ಶೈಲಿಯ ಚಾರ್ಜಿಂಗ್ ಇದ್ದು ಕೇವಲ 15 20 ನಿಮಿಷಗಳಲ್ಲಿ ಅರ್ಧದಷ್ಟು ಚಾರ್ಜ ಮಾಡಬಹುದು.
16MP + 5MP (f 1.8 & f 2.2 ) ದ್ವಿ ಹಿಂಭಾಗದ ಕ್ಯಾಮೆರಾ, ಪೋಟ್ರೈಟ್ ಚಿತ್ರಗನ್ನು ಕೂಡ ಸೆರೆ ಹಿಡಿಯಬಹುದಾಗಿದೆ, ಮುಂಭಾಗದಲ್ಲಿ 12MP( f 2.0 ) ( f 2.0 ) ಸ್ವಂತಿ ಕ್ಯಾಮೆರಾ ಇದೆ. 2160p HD ವಿಡಿಯೋ ರೆಕಾರ್ಡಿಂಗ್ ಸಹ ಮಾಡಬಹುದು. ಆಂಡ್ರಾಯ್ಡ್ ಒನ್ ಚಾಲಿತ ಫೋನ್ ಆಗಿದ್ದು ಗೂಗಲ್ ನ ಹೊಸ ಆಪ್ಸ್ ಹಾಗೂ ಹೊಸ ಹೊಸ ಸೇವೆಗಳ ಸೌಲಭ್ಯ ಸಿಗಲಿದೆ. ಇಂತಹ ಪ್ರಮುಖ ವಿಶೇಷತೆಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದ್ದು, ಇದು ಗ್ರಾಹಕರ ಕೈ ಸೇರಿದ ಬಳಿಕವಷ್ಟೇ ಇದರ ಸಂಪೂರ್ಣ ಚಿತ್ರಣ ತಿಳಿಯಲಿದೆ. ಇದರ ಬೆಲೆ 15,999 ರೂಪಾಯಿ ಆಗಿದ್ದು, ಅಕ್ಟೋಬರ್ 5 ರ ಮಧ್ಯಾಹ್ನ 12ಕ್ಕೆ ಫ್ಲಿಪ್ಕಾರ್ಟ್‘ಲ್ಲಿ ಮೊದಲ ಸೇಲ್ ಆಗಲಿದ್ದು ಅಲ್ಲಿಂದ ಖರೀದಿಸಬಹುದಾಗಿದೆ,ಈ ಫೋನ್’ನ ಹೆಚ್ಚಿನ ಮಾಹಿತಿ ಹಾಗೂ ಖರೀದಿಸಲು ಅಧಿಕೃತ ಲಿಂಕ್ || //bit.ly/MotorOnePower || *ಸೂರಜ್ ಅಣ್ವೇಕರ್, ಬೆಂಗಳೂರು