Advertisement

ಮೊಟೊರೊಲಾ ಎಡ್ಜ್ 30 ಬಿಡುಗಡೆ; ಮೇ 19ರಿಂದ ಮಾರುಕಟ್ಟೆಯಲ್ಲಿ ಲಭ್ಯ

06:28 PM May 14, 2022 | Team Udayavani |

ಮೊಟೊರೊಲಾ ಸಂಸ್ಥೆಯು ಎಡ್ಜ್ 30 ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 6.5 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಫೋನು ಅರೋರಾ ಗ್ರೀನ್‌ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯ. ತ್ರಿಬಲ್‌ ರೇರ್‌ ಕ್ಯಾಮರಾವಿರುವ ಫೋನಿನಲ್ಲಿ 50ಎಂಪಿ ಪ್ರೈಮರಿ ಕ್ಯಾಮರಾ ಹಾಗೂ 32ಎಂಪಿ ಸೆಲ್ಫಿ ಕ್ಯಾಮರಾವಿದೆ.

Advertisement

4,020ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 32.1 ತಾಸುಗಳ ಬ್ಯಾಟರಿ ಬ್ಯಾಕಪ್‌ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ:155245: ಹಲೋ, ಕಂದಾಯ ಸಚಿವರೇ…ಸಹಾಯವಾಣಿ ಆರಂಭ

6ಜಿಬಿ RAM ಜತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನ ಬೆಲೆ 27,999 ರೂ. ಹಾಗೂ 8ಜಿಬಿ RAM ಜತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನ ಬೆಲೆ 27,999 ರೂ. ಈ ಫೋನು ಮೇ 19ರಿಂದ ಮಾರುಕಟ್ಟೆಯಲ್ಲಿ ಲಭ್ಯ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next