Advertisement
ಸ್ಮಾರ್ಟ್‌ಫೋನ್‌ಗಳೆಲ್ಲ ಕೈಗೆಟುಕದ ಕಾಲದಲ್ಲಿ, ಅಂದಿನ ಕಾಲಕ್ಕೆ ಮಧ್ಯಮವರ್ಗದ ಜನರ ಕೈಗೆ ಸ್ಮಾರ್ಟ್‌ಫೋನ್ ಎಟುಕುವಂತೆ ಮಾಡಿದ ಮೊದಲ ಕಂಪೆನಿ ಮೋಟೊರೋಲಾ. ಗೂಗಲ್ ಒಡೆತನದಿಂದ ಬಳಿಕ ಲೆನೊವೋ ಕಂಪೆನಿಯ ಒಡೆತನದಲ್ಲಿರುವ ಮೋಟೋ ಇದೀಗ ಅಂಡ್ರಾಯ್ಡ ಸ್ಮಾರ್ಟ್ ಟಿವಿ ಕ್ಷೇತ್ರಕ್ಕೆ ಲಗ್ಗೆ ಹಾಕಿದೆ. ತನ್ನ ಎರಡು ಅಂಡ್ರಾಯ್ಡ ಟಿವಿಗಳನ್ನು ಇದೀಗ ಭಾರತದಲ್ಲಿ ಬಿಡುಗಡೆ ಮಾಡಿದ್ದು ಅವುಗಳ ಗುಣವಿಶೇಷಗಳು ಇಂತಿವೆ.
ಇದು 43ಇಂಚಿನ, 16 ದಶಲಕ್ಷ ಬಣ್ಣಗಳನ್ನೊಳಗೊಂಡ ಐಪಿಎಸ್ ಪರದೆ ಹೊಂದಿದೆ. 178 ಡಿಗ್ರಿಕೋನದಲ್ಲಿ ನೋಡಿದರೂ ಟಿವಿ ವೀಕ್ಷಣೆ ಚೆನ್ನಾಗಿ ಇರುತ್ತದೆ ಎಂದು ಕಂಪೆನಿ ಹೇಳುತ್ತದೆ. ಫುಲ್ ಎಚ್‌ಡಿ-1920×1080 ಪಿಕ್ಸಲ್‌ಗಳ ಪರದೆ ಹೊಂದಿದೆ. ಸೂಪರ್ ಬ್ರೈಟ್ ಪ್ಯಾನೆಲ್ ಅನ್ನು ಅಳವಡಿಸಲಾಗಿದ್ದು, ಇದು ಹೆಚ್ಚು ಪ್ರಕಾಶವುಳ್ಳ, ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. (ಮಾಡೆಲ್: 43ಎಸ್‌ಎಎಫ್ಎಚ್‌ಡಿಎಂ)
ಬೆಲೆ: 24,999 ರೂ.
Related Articles
ಕೇವಲ ಚಿತ್ರಗಳು ಚೆನ್ನಾಗಿ ಮೂಡಿ ಬಂದರೆ ಸಾಕೇ? ಉತ್ತಮ ಆಡಿಯೋ ಪರಿಣಾಮ ಇರಬೇಕು ಎಂದು ಅನೇಕರು ಬಯಸುತ್ತಾರೆ. ಅದಕ್ಕಾಗಿ 20 ವ್ಯಾಟ್ಸ್ (ಆರ್‌ಎಂಎಸ್) ಡಾಲ್ಬಿ ಆಡಿಯೋ ಉಳ್ಳ ಸ್ಪೀಕರ್‌ಗಳನ್ನು ನೀಡಲಾಗಿದೆ.
Advertisement
1 ಜಿಬಿ ರ್ಯಾಮ್ ಮತ್ತು 8 ಜಿಬಿ ಸಂಗ್ರಹಈ ಟಿವಿ 1 ಜಿ.ಬಿ ರ್ಯಾಮ್ ಮತ್ತು 8 ಜಿ.ಬಿ ಆಂತರಿಕ ಸಂಗ್ರಹಹೊಂದಿದೆ. ಸ್ಮಾರ್ಟ್ ಟಿ.ವಿ ಲೆಕ್ಕಕ್ಕೆ ಇದು ಸಾಕು. ಎಆರ್‌ಎಂ ಸಿಎ 53 ನಾಲ್ಕು ಕೋರ್‌ಗಳ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್‌ಗಾಗಿ ಮಾಲಿ 470, ಎಂಪಿ3 ಪ್ರೊಸೆಸರ್ ಇದೆ. ಇದು ಆಂಡ್ರಾಯ್ಡ 9 ಪೈ ಆವೃತ್ತಿ ಹೊಂದಿದ್ದು, ಅಂಡ್ರಾಯ್ಡ 10 ಅಪ್‌ಡೇಟ್ ದೊರಕಲಿದೆ. ಪ್ಲೇಸ್ಟೋರ್, ಯೂಟ್ಯೂಬ್, ಅಮೆಝಾನ್ ಪ್ರೈಮ್ ವಿಡಿಯೋ
ಗ್ರಾಹಕರ ಮನೋರಂಜನೆಗಾಗಿ ಟಿ.ವಿ ಜೊತೆಯಲ್ಲೇ ಮೊದಲೇ ಸ್ಥಾಪಿಸಲಾಗಿರುವ ಯೂಟ್ಯೂಬ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಗೂಗಲ್ ಪ್ಲೇ, ಗೂಗಲ್ ಪ್ಲೇ ಗೇಮ್ಸ್, ಅಮೆಝಾನ್ ಪ್ರೈಮ್ ವಿಡಿಯೋ ಇತ್ಯಾದಿ ಇರುತ್ತದೆ. ಬಳಿಕವೂ ಗ್ರಾಹಕರು, ಪ್ಲೇಸ್ಟೋರ್ ಮೂಲಕ ತಮಗೆ ಬೇಕಾದ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಗೇಮ್ಸ್ ಮೂಲಕ ಟಿವಿಯಲ್ಲೇ ಆಸಾ#ಲ್ಟ್ 8ನಂಥ ಗೇಮ್‌ಗಳನ್ನು ಆಡಬಹುದು. ಗ್ರಾಹಕ ಸ್ನೇಹಿ ರಿಮೋಟ್
ಗೂಗಲ್ ಅಸಿಸ್ಟೆಂಟ್, ಪ್ರೈಮ್ ವಿಡಿಯೋ, ಗೂಗಲ್ ಪ್ಲೇ, ನೆಟ್‌ಫ್ಲಿಕ್ಸ್ ಗುಂಡಿಗಳನ್ನುಳ್ಳ ರಿಮೋಟ್ ನೀಡಲಾಗಿದೆ. ಈ ಗುಂಡಿಗಳನ್ನು ಒತ್ತಿ ಗ್ರಾಹಕರು ನೇರವಾಗಿ ಆಯಾ ಆ್ಯಪ್‌ಗ್ಳಿಗೆ ಪ್ರವೇಶ ಪಡೆಯಬಹುದು. ಗೂಗಲ್ ಅಸಿಸ್ಟೆಂಟ್‌ನಿಂದ ನಿಮ್ಮ ಧ್ವನಿ ಬಳಸಿ ನಿಮಗೆ ಬೇಕಾದ ಕಾರ್ಯಕ್ರಮ ಹುಡುಕಬಹುದು. ನಿಮ್ಮ ಮೊಬೈಲ್ ಅನ್ನು ಕಾಸ್ಟ್ ಮಾಡಿ ನಿಮ್ಮ ಮೊಬೈಲ್ ಅನ್ನು ಟಿವಿ ಪರದೆಯಲ್ಲಿ ವೀಕ್ಷಿಸಬಹುದು. ನಿಮ್ಮ ಮೊಬೈಲ್ ಅನ್ನು ಹಾಟ್‌ಸ್ಪಾಟ್ ಮಾಡಿ, ಅದರಲ್ಲಿರುವ ಡಾಟಾ ಬಳಸಿ ಟಿವಿಯಲ್ಲಿ ಕಾರ್ಯಕ್ರಮಗಳನ್ನು, ಸಿನಿಮಾ, ವಿಡಿಯೋಗಳನ್ನು ವೀಕ್ಷಿಸಬಹುದು. ಮೋಟೊರೋಲಾ 32 ಇಂಚಿನಟಿವಿ
ಈ ಮಾಡೆಲ್‌ನಲ್ಲಿ ಪರದೆಯ ಅಳತೆ 32 ಇಂಚು ಮತ್ತು ಎಚ್‌ಡಿ ರೆಡಿ ಪರದೆ 1366×768 ಪಿಕ್ಸಲ್ ಪರದೆ (ಫುಲ್ ಎಚ್‌ಡಿ ಇಲ್ಲ) ಅನ್ನು ಹೊರತುಪಡಿಸಿದರೆ ಇನ್ನೆಲ್ಲಾ ಗುಣವಿಶೇಷಣಗಳು ಮೇಲೆ ಹೇಳಿದ 43 ಇಂಚಿನ ಮಾಡೆಲ್‌ನಲ್ಲಿರುವ ವಿಶೇಷಗಳೇ ಇವೆ. ಇದರಲ್ಲೂ 1 ಜಿಬಿ ರ್ಯಾಮ್ 8 ಜಿ.ಬಿ ಆಂತರಿಕ ಸಂಗ್ರಹ, 20 ವ್ಯಾಟ್ಸ್ ಡಾಲ್ಬಿ ಆಡಿಯೋ ಸ್ಪೀಕರ್ ಎಲ್ಲ ಇದೆ. ಪರದೆಯ ಅಳತೆ ಮತ್ತು ಪರದೆಯ ರೆಸಲ್ಯೂಶನ್ ಕಡಿಮೆ ಅಷ್ಟೇ. (ಮಾಡೆಲ್: 32ಎಸ್‌ಎಎಫ್ಎಚ್‌ಡಿಎಂ)
ಬೆಲೆ: 13,999 ರೂ. ಕೆ.ಎಸ್. ಬನಶಂಕರ ಆರಾಧ್ಯ