Advertisement

ಕುಡಿದು ವಾಹನ ಚಲಾಯಿಸಿ ಸಾವಿಗೆ ಕಾರಣರಾದರೆ 7 ವರ್ಷ ಜೈಲು

05:01 PM Dec 23, 2017 | Team Udayavani |

ಹೊಸದಿಲ್ಲಿ : 2016ರ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಗೆ ಸಲ್ಲಿಸಿರುವ ಸೆಲೆಕ್ಟ್ ಕಮಿಟಿಯು ತನ್ನ ಶಿಫಾರಸುಗಳಲ್ಲಿ  ಮದ್ಯ ಸೇವಿಸಿ ವಾಹನ ಚಲಾಯಿಸಿ ಸಾವಿಗೆ ಕಾರಣವಾಗುವ ಅಪಘಾತ ಎಸಗುವವರಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬೇಕೆಂದು ಹೇಳಿದೆ.

Advertisement

ಈ ಶಿಫಾರಸುಗಳಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳ ಸ್ವಾಯತ್ತೆ ರಕ್ಷಣೆಯನ್ನು ಭರವಸೆಯನ್ನು ನೀಡಿರುವ ಸಮಿತಿಯು “ಏಕ ರಾಷ್ಟ್ರ, ಏಕ ಪರ್ಮಿಟ್‌, ಏಕ ತೆರಿಗೆ” ಗೆ ಪ್ರಾದೇಶಿಕ ಸಾರಿಗೆ ಕಚೇರಿಗಳು ಒಲವು ತೋರಿರುವುದಾಗಿ ಹೇಳಿದೆ.

ಲೋಕಸಭೆಯಲ್ಲಿ ಈ ತಿದ್ದುಪಡಿ ಮಸೂದೆಯು ಈಗಾಗಲೇ ಮಂಡಿಸಲ್ಪಟ್ಟು ಅನುಮೋದಿತವಾಗಿದೆ; ಅನಂತರ ರಾಜ್ಯಸಭೆಯಲ್ಲಿ ಈ ಮಸೂದೆ ನನೆಗುದಿಗೆ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next