ಸೈಕಲ್‌ಗೆ 80ಸಿ.ಸಿ. ಇಂಜಿನ್, ಕಾಬೊìರೇಟರ್, ಮಫರ್ ಹಾಗೂ ಎಕ್ಸಲೇಟರ್ ಕೇಬಲ್ಸ್, ಇಂಡಿಕೇಟಸ್ ಗಳನ್ನು ಅಳವಡಿಸಿ, ಪ್ರತಿ ಲೀಟರ್‌ಗೆ 76 ಕಿ.ಮೀ. ಮೈಲೇಜ್ ನೀಡುವ ಹಾಗೂ ಗಂಟೆಗೆ 50 ರಿಂದ 55 ಕಿ.ಮೀ. ವೇಗವಾಗಿ ಕ್ರಮಿಸುವ ಮೊಟಾರ್ ಬೈಸಿಕಲ್ ತಯಾರು ಮಾಡಿದ್ದಾರೆ.
Advertisement
ಅತ್ಯಂತ ಕಡಿಮೆ ಬೆಲೆಯಲ್ಲಿ ತಯಾರಿಸಬಹುದಾದ, ಹಗುರವಾದ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಅತ್ಯಂತ ಕಡಿಮೆ ಇದ್ದು, ಪರಿಸರ ಪ್ರೇಮಿ ಮೋಟೋರೈಸ್ಡ್ ಬೈಸಿಕಲ್ ಇದಾಗಿದೆ. ವಿದ್ಯಾರ್ಥಿಗಳಾದ ಸಚಿನ್, ಅರ್ಪಿತ್ ಜೈವಂತ್, ಅಲೊಯ್ಸ ಫರ್ನಾಂದಿಸ್, ಪ್ರವೀಣ್ ನಾಯ್ಕ, ಲಲಿತ್, ವಿಶ್ವರಾಜ್, ಸಚಿನ್, ಸಮೀರ್ ಇವರು ಉಪನ್ಯಾಸಕ ರಾಘವೇಂದ್ರ ಗೋವೆಂಕರ್, ವಿಭಾಗದ ಮುಖ್ಯಸ್ಥ ನಾಗರಾಜ್ ಪಿ. ಇವರ ಮಾರ್ಗದರ್ಶನದಲ್ಲಿ ತಯಾರಿಸಿದ್ದಾರೆ.