ಮೊಟೊರೊಲಾ ಸಂಸ್ಥೆಯು ಮೊಟೊ ಇ22ಎಸ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನು 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯ. ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, ಪ್ರೈಮರಿ ಕ್ಯಾಮೆರಾ 16ಎಂಪಿ ಹಾಗೂ ಸೆಲ್ಫಿ ಕ್ಯಾಮೆರಾ 8ಎಂಪಿಯಿದೆ.
Advertisement
5000ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. 4GB RAM ಜತೆ 64ಜಿಬಿ ಇಂಟರ್‌ನಲ್ ಸ್ಟೋರೇಜ್ ಇದೆ. ಮೆಮೋರಿ ಕಾರ್ಡ್ ಬಳಸಿ ಇಂಟರ್‌ನಲ್ ಸ್ಟೋರೇಜ್ ಅನ್ನು 1ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
ಅ.22ರಿಂದ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಈ ಸ್ಮಾರ್ಟ್‌ಫೋನ್ ಬೆಲೆ 8,999 ರೂ.