Advertisement
ತಾಲೂಕಿನ ನೇಸರಗಿ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನ ದೇವಸ್ಥಾನದಲ್ಲಿ ರವಿವಾರ ನಡೆದ ರೈತ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ, ಸಮಗ್ರ ಕೃಷಿ ಅಭಿಯಾನ ಸಮಾರೋಪ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
ಐಟಿಐ ಕಾಲೇಜು ಸ್ಥಳಾಂತರ ವಿರೋಧಿಸಿ ಶಾಸಕರಿಗೆ ಮನವಿ
ನೇಸರಗಿ ಗ್ರಾಮದಲ್ಲಿರುವ ಸರಕಾರಿ ಐಟಿಐ ಕಾಲೇಜನ್ನು ಸ್ಥಳಾಂತರ ಮಾಡದೇ ಇಲ್ಲಿಯೇ ಕಾಲೇಜಿಗೆ ಕಟ್ಟಡ ನಿರ್ಮಿಸಬೇಕು. ಎಪಿಎಂಸಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೇಸರಗಿ ಗ್ರಾಮಸ್ಥರು ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ರವಿವಾರ ಮನವಿ ಸಲ್ಲಿಸಿದರು. ಸರಕಾರಿ ಪಿಯುಸಿ ಕಾಲೇಜಿನಲ್ಲಿ ಐಟಿಐ ತರಗತಿಗಳು ನಡೆಯುತ್ತಿವೆ. ಇದರಿಂದ ಈ ಭಾಗದ ನಿರುದ್ಯೋಗಿ ಯುವಕರಿಗೆ ಕೈಗಾರಿಕೆ ವಲಯದಲ್ಲಿ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗಿದೆ. ಐಟಿಐ ಕಾಲೇಜನ್ನು ನೇಸರಗಿ ಬಿಟ್ಟು ಸ್ಥಳಾಂತರಿಸಲು ಶಾಸಕರು ಪ್ರಯತ್ನಿಸಿರುವುದು ಖಂಡನೀಯವೆಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಕೆಂಚಪ್ಪ ಕಳ್ಳಿಬಡ್ಡಿ, ಬಾಳಪ್ಪ ಮಾಳಗಿ, ಸೋಮನಗೌಡ ಪಾಟೀಲ, ರಮೇಶ ರಾಯಪ್ಪಗೋಳ, ಮಹಾಂತೇಶ ಕೂಲಿನವರ, ಮಲ್ಲೇಶ ಮಾಳನ್ನವರ, ಫಕ್ಕೀರಪ್ಪ ಸೊಮನ್ನವರ, ವಿನಾಯಕ ಮಾಸ್ತಮರಡಿ, ಪುಂಡಲೀಕ ಚಿಕ್ಕನಗೌಡರ, ಪ್ರಕಾಶ ತೊಟಗಿ, ದೇಮಣ್ಣ ಗುಜನಟ್ಟಿ, ಸೋಮಶೇಖರ ಮಾಳನ್ನವರ ಇತರರು ಇದ್ದರು.
ರೈತರ ಆಕ್ರೋಶ ನೇಸರಗಿಯಲ್ಲಿ ರವಿವಾರ ನಡೆದ ರೈತ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ, ಸಮಗ್ರ ಕೃಷಿ ಅಭಿಯಾನ ಸಮಾರೋಪ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿತು. ಕಾರ್ಯಕ್ರಮಕ್ಕೆ ರೈತರನ್ನು ಆಮಂತ್ರಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸ್ಥಳದಲ್ಲಿದ್ದ ಶಾಸಕ ಮಹಾಂತೇಶ ದೊಡಗೌಡರ ರೈತರನ್ನು ಸಮಾಧಾನಪಡಿಸಿ, ಕಾರ್ಯಕ್ರಮಕ್ಕೆ ರೈತರನ್ನು ಆಹ್ವಾನಿಸದೆ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಹೀಗಾದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಆಗ ಬೈಲಹೊಂಗಲ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ ಹೂಗಾರ ಮತ್ತು ಕೃಷಿ ಅಧಿಕಾರಿ ಆರ್.ಐ. ಕುಂಬಾರ ಪ್ರತಿಕ್ರಿಯಿಸಿ, ತಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
Advertisement