Advertisement

“ಜೀವನ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರ’

07:18 PM May 16, 2019 | Team Udayavani |

ವಿದ್ಯಾನಗರ: ಮಗುವಿನ ಜೀವನವನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾಗಿದ್ದು, ಹಂತ ಹಂತವಾಗಿ ಆಕೆ ಮಕ್ಕಳಿಗೆ ನೀಡಬೇಕಾದ ವಾತ್ಸಲ್ಯ, ಸಂಸ್ಕಾರದಿಂದ ಸಾಕಿ ಸಲಹಬೇಕಾಗಿದೆ. ಮಕ್ಕಳನ್ನು ಉತ್ತಮ ನಾಗರಿಕರಾಗಿ ಮಾಡುವ ಜವಾಬ್ದಾರಿ ತಂದೆ-ತಾಯಿಯಲ್ಲಿರ ಬೇಕು ಎಂದು ಕುಂಡಂಗುಳಿ ಹರಿಶ್ರೀ ವಿದ್ಯಾಲಯದ ಶಿಕ್ಷಕಿ ಇಂದಿರಾ ಕುಟ್ಟಿ ಟೀಚರ್‌ ಅವರು ಹೇಳಿದರು.

Advertisement

ಕುಂಡಂಗುಳಿ ಜಾಲುಮನೆ ಕೋಟೆ ಬಯಲು ವಾಗ್ಮಾನ್‌ ದೇವರಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕುಲಗುರು ತಾನೋಜಿ ರಾವ್‌ ವಾಗ್ಮಾನ್‌ ಅವರು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಉದ್ಘಾಟಿಸಿದರು. ಬ್ರಹ್ಮಕ ಲಶೋತ್ಸವ ಸಮಿತಿ ಅಧ್ಯಕ್ಷ ರಾಮೋಜಿ ರಾವ್‌ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುಂಡೂರು ಇವರಿಂದ ಶಾಂಭವಿ ವಿಲಾಸ ಮಕ್ಕಳ ಯಕ್ಷಗಾನ ನಡೆಯಿತು. ಬುಧವಾರ ವಿಟuಲ ನಾಯಕ್‌ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ವೈಭವ, ಭಜನೆ, ಹರಿಶ್ರೀ ವಿದ್ಯಾಲಯ ಕುಂಡಂಗುಳಿ ಇವರಿಂದ ಯೋಗ ಪ್ರದರ್ಶನ, ವಿವೇಕಾನಂದ ನಾಟ್ಯ ನಿಲಯ ಕುಂಟಾರು ಇವರಿಂದ ಭರತನಾಟ್ಯ, ದೆ„ವಜ್ಞ ಬೇಳ ಪದ್ಮನಾಭ ಶರ್ಮ ಇವರಿಂದ ಅನುಗ್ರಹ ಆಶೀರ್ವಚನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next