Advertisement

ಲಾಕ್ ಡೌನ್ : 5 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು 90 ಕಿ.ಮೀ ನಡೆದ ತಾಯಿ.!

01:58 PM Jun 12, 2021 | Team Udayavani |

ದಾವಣಗೆರೆ: ಕೋವಿಡ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಸ್ ಇಲ್ಲದೇ  ತಾಯಿಯೋರ್ವಳು  ತನ್ನ ಐದು ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಬರೋಬರಿ 90 ಕಿಮೀ ನಡೆದು ಮನೆ ಸೇರಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

Advertisement

ಐದು ವರ್ಷದ ಮಗನನ್ನು ಎತ್ತಿಕೊಂಡು ಅಂದಾಜು 90 ಕಿಮೀ ನಡೆದುಕೊಂಡು ಬಂದ ಆ ಮಹಾತಾಯಿಯ ಹೆಸರು ನಾಗರತ್ನಾ. ಈಕೆ ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದಿಂದ ದಾವಣಗೆರೆವರೆಗೆ ಮಗು ಎತ್ತಿಕೊಂಡು ಕಾಲ್ನಡಿಗೆಯಲ್ಲಿ ಬಂದಿದ್ದಾಳೆ. ಕುಟುಂಬದಲ್ಲಿ‌ ನಡೆದ ಜಗಳವೇ ಈಕೆ ಮನೆ ಬಿಟ್ಟು ಬರಲು ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರ ಸಾವು

ಪತಿಯೊಂದಿಗೆ ಜಗಳ‌ಮಾಡಿಕೊಂಡು ಮಗು ಹಾಗೂ ಬಟ್ಟೆ ಚೀಲದೊಂದಿಗೆ ಬೆಳಿಗ್ಗೆಯೇ ಮನೆಯಿಂದ ಹೊರಟ ನಾಗರತ್ನ, ಶಿವಮೊಗ್ಗದಿಂದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆಯಲ್ಲಿರುವ ಅಕ್ಕನ‌ ಮನೆಗೆ ಹೋಗುತ್ತಿದ್ದಳು. ರಾತ್ರಿ 9.30 ವೇಳೆಗೆ ನಗರದ ಎಸ್ ಎಸ್ ಆಸ್ಪತ್ರೆ ಬಳಿ ನಗರದ ಪೋಲೀಸರು ಆಕೆಯನ್ನು ವಿಚಾರಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆಕೆಯನ್ನು ಪೊಲೀಸ್ ವಾಹನದಲ್ಲಿ ತುಂಬಿಕೆರೆ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next