Advertisement

ಹಣ ವರ್ಗಾವಣೆಗೆ ಮಾತೃಭಾಷೆ?: NPCI, AI4Bharat ನಿಂದ ಶೀಘ್ರ ಹೊಸ ವ್ಯವಸ್ಥೆ

09:05 PM Jun 12, 2023 | Team Udayavani |

ನವದೆಹಲಿ: ಸ್ಮಾರ್ಟ್‌ಫೋನ್‌ ಮತ್ತು ಮೊಬೈಲಲ್ಲೇ ಇಂಟರ್‌ನೆಟ್‌ನಿಂದಾಗಿ ಹಣ ವರ್ಗಾವಣೆ ಇತ್ತೀಚಿನ ವರ್ಷಗಳಲ್ಲು ಸುಲಭವಾಗಿದೆ. ಆ ವ್ಯವಸ್ಥೆ ನಮ್ಮ ಮಾತೃಭಾಷೆಯಲ್ಲೇ ಲಭ್ಯವಾದರೆ ಹೇಗೆ? ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ಎಐ4ಭಾರತ್‌ ಮತ್ತು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಶನ್‌ ಆಫ್ ಇಂಡಿಯಾ(ಎನ್‌ಪಿಸಿಐ) ಅಭಿವೃದ್ಧಿಪಡಿಸುತ್ತಿದೆ. ಒಂದು ವೇಳೆ, ಈ ಸೌಲಭ್ಯ ಜಾರಿಗೆ ಬಂದರೆ ದೇಶದ ಅತ್ಯಂತ ಸಾಮಾನ್ಯ ವ್ಯಕ್ತಿಗೂ ಹಣ ವರ್ಗಾವಣೆ ವ್ಯವಸ್ಥೆ ಸುಲಭವಾಗಲಿದೆ ಮತ್ತು ಈಗಿನ ಕೆಲವು ತಾಂತ್ರಿಕ ಕಸರತ್ತುಗಳಿಗೆ ವಿದಾಯ ಸಿಗಲಿದೆ.

Advertisement

ಯುನಿಫೈಡ್‌ ಪೇಮೆಂಟ್ಸ್‌ ಕಾರ್ಪೊರೇಷನ್‌(ಯುಪಿಐ) ಸೇರಿದಂತೆ ವಿವಿಧ ಪಾವತಿ ಗೇಟ್‌ವೇಗಳನ್ನು ಬಳಸುವ ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಇದರಿಂದ ಉಪಯೋಗವಾಗಲಿದೆ. ಭಾರತೀಯ ಎಲ್ಲಾ ಪ್ರಮುಖ ಭಾಷೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಐವಿಆರ್‌ಎಸ್‌ ಅನ್ನು ಚೆನ್ನೈನಲ್ಲಿರುವ ಐಐಟಿ ಮದ್ರಾಸ್‌ನ ಲ್ಯಾಂಗ್ವೇಜ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸೆಂಟರ್‌ (ಭಾಷೆಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ ಕೇಂದ್ರ)ನಲ್ಲಿ ಎನ್‌ಪಿಸಿಐ ಸಹಯೋಗದಲ್ಲಿ ಎಐ4ಭಾರತ್‌ ಅಭಿವೃದ್ಧಿಪಡಿಸುತ್ತಿದೆ.
ಪ್ರಸ್ತುತ ಸ್ಮಾರ್ಟ್‌ ಫೋನ್‌ನ ಹೆಚ್ಚಿನ ಬಳಕೆದಾರರು ಕ್ಯೂಆರ್‌ ಕೋಡ್‌ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ.

ಆದರೆ ಮುಂದಿನ ದಿನಗಳಲ್ಲಿ ಐವಿಆರ್‌ಎಸ್‌ ತಂತ್ರಜ್ಞಾನ ಸಪೋರ್ಟ್‌ ಮಾಡುವ ಸ್ಮಾರ್ಟ್‌ ಫೋನ್‌ಗಳಲ್ಲಿ ಮಾತ್ರ ಮಾತೃಭಾಷೆಯಲ್ಲಿ ಸೂಚನೆ ನೀಡುವ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ.
ಇದರ ಪ್ರಾಯೋಗಿಕ ಪರೀಕ್ಷೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ ಎಂದು “ದ ಇಕನಾಮಿಕ್‌ ಟೈಮ್ಸ್‌” ವರದಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next