ಕೊಳ್ಳೇಗಾಲ: ಗಂಡು ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಬಸ್ ನಿಲ್ದಾಣದ ಬಳಿ ಇರುವ ಕಸದ ರಾಶಿಯಲ್ಲಿ ಸೇರಿದ ಘಟನೆಯೊಂದು ತಾಲೂಕಿನ ಮತ್ತಿಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬೆಳಿಗ್ಗೆ ಎದ್ದ ಗ್ರಾಮ ಸ್ತರು ಕಸದ ರಾಶಿಯಲ್ಲಿ ಒಟ್ಟೆಯಿಂದ ಸುತ್ತಿದ್ದ ಮಗುವನ್ನು ಕಂಡು ಗಾಬರಿಗೊಂಡು ಬಳಿಕ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿ.ಎಸ್.ಐ. ಮಂಜುನಾಥ್ ಸಿ ಭಂದಿ ವಿರೇಂದ್ರ ಮತ್ತು ವಸಂತಪರಿಶೀಲಿಸುವ ವೇಳೆ ಸ್ಥಳಕ್ಕೆ ಮಗು ಬೇಕೆಂದು ತಾಯಿ ಪ್ರತ್ಯಕ್ಷವಾಗಿದ್ದಳು.
ಗಂಡ ಮೃತಪಟ್ಟ ಬಳಿಕ ಮಗು ಬೇಡವೆಂದು ಬಿಸಾಡಿಡಿದ್ದು, ತನ್ನ ತಪ್ಪನ್ನು ತಿದ್ದಿಕೊಂಡು ಮಗುವನ್ನು ಜೋಪಾನ ಮಾಡುವುದಾಗಿ ಖಚಿತಪಡಿಸಿದ ಬಳಿಕ ಪೊಲೀಸರು ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದರು.
ಎಷ್ಟೋ ಜನರು ಹೆಣ್ಣು ಭ್ರೂಣವನ್ನು, ಮಗುವನ್ನು ಬಿಸಾಡಿರುವುದನ್ನು ಕಂಡಿದ್ದ ಗ್ರಾಮಸ್ಥರು ಈಗ ಗಂಡು ಮಗುವನ್ನೇ ಬಿಸಾಡಿರುವ ಬಗ್ಗೆ ಅಸಮಾಧಾನ ಗೊಂಡು. ಈಗಲಾದರೂ ಮಗುವನ್ನು ಜೋಪಾನವಾಗಿ ಸಾಕುವಂತೆ, ಸಾಕಲು ತೂಂದರೆಯಾದರೆ ಮಕ್ಕಳಿಲ್ಲದವರಿಗೆ ದಾನ ಮಾಡಿ ಬೆಳೆಸುವಂತೆ ಮಗುವಿನ ತಾಯಿಗೆ ಕಿವಿ ಮಾತು ಹೇಳಿ ಪ್ರಕರಣಕ್ಕೆ ತೆರೆ ಎಳೆದರು.