ತೆಲಂಗಾಣ(ಕಾಮರೆಡ್ಡಿ): ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಆತನ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಡಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್)ಯ ಆರು ಮಂದಿ ಮುಖಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ (ಏಪ್ರಿಲ್ 20) ತಿಳಿಸಿದ್ದಾರೆ.
ಇದನ್ನೂ ಓದಿ:ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ: ಆಶೋಕ್, ಯಡಿಯೂರಪ್ಪ ವಿರುದ್ದ ಡಿಕೆಶಿ ವ್ಯಂಗ್ಯ
ಟಿಆರ್ ಎಸ್ ಮುಖಂಡರು ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಕಿರುಕುಳ ನೀಡಿರುವುದಾಗಿ ಆರೋಪಿಸಿ ಏಪ್ರಿಲ್ 16ರಂದು ಕಾಮರೆಡ್ಡಿ ಲಾಡ್ಜ್ ವೊಂದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗಂಗಂ್ ಸಂತೋಷ್ ಮತ್ತು ಅವರ ತಾಯಿ ಗಂಗಮ್ ಪದ್ಮಾ ಬೆಂಕಿಹಚ್ಚಿಕೊಂಡು ಸಾವನ್ನಪ್ಪಿದ್ದರು.
ಸಾವಿಗೆ ಶರಣಾಗುವ ಮುನ್ನ ಸಂತೋಷ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ, ರಾಮಯಂಪೇಟ್ ನಗರಪಾಲಿಕೆ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ್, ಐವರು ಟಿಆರ್ ಎಸ್ ಮುಖಂಡರು ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ನಾಗಾರ್ಜುನ್ ರೆಡ್ಡಿ ಹೆಸರನ್ನು ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ವಿಡಿಯೋದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ನನ್ನ ಉದ್ಯಮ ಹಾಳುಗೆಡವಿದ್ದಾರೆ. ಇದರಿಂದಾಗಿ ನನಗೆ ಜೀವನ ನಿರ್ವಹಣೆ ಕಷ್ಟವಾಗತೊಡಗಿದೆ ಎಂದು ಸಂತೋಷ್ ಸೂಸೈಡ್ ನೋಟ್ ಬರೆದಿಟ್ಟುರುವುದಾಗಿ ವರದಿ ತಿಳಿಸಿದೆ.
ಆರ್ಥಿಕವಾಗಿ ನಾನು ಸಂಪೂರ್ಣವಾಗಿ ದಿವಾಳಿಯಾಗಿದ್ದೇನೆ. ನನ್ನ ಮತ್ತು ತಾಯಿಯ ಸಾವಿನ ನಂತರವಾದರು ನ್ಯಾಯ ಸಿಗಲಿದೆ ಎಂಬ ಭರವಸೆ ಇದ್ದಿರುವುದಾಗಿ ಸಂತೋಷ್ ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದಾಗಿ ವರದಿ ತಿಳಿಸಿದೆ.