Advertisement

ಮನೆ ವಿಳಾಸ ಮರೆತಿದ್ದ ತಾಯಿ ಮರಳಿ ಗೂಡಿಗೆ

12:45 PM Jun 22, 2022 | Team Udayavani |

ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ತರಕಾರಿ ತರಲು ಹೋಗಿ ವಿಳಾಸ ಮರೆತು ರಸ್ತೆ ಬದಿ ಅಳುತ್ತ ನಿಂತಿದ್ದ ವೃದ್ಧೆ ವಾಸಂತಿ ಎಂಬವವರನ್ನು ಅವರ ಕುಟುಂಬ ಸದಸ್ಯರಿಗೆ ಒಪ್ಪಿಸುವ ಮೂಲಕ ಪುಲಕೇಶಿನಗರ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

Advertisement

ತಮಿಳುನಾಡಿನ ತಿರುವಣ್ಣಾಮಲೈ ನಿಂದ ಬೆಂಗಳೂರಿಗೆ ಪುತ್ರ ರಾಜೇಶ್‌ ಮತ್ತು ಸೊಸೆ ಗೌತಮಿ ಜತೆ ರೈಲಿನಲ್ಲಿ ಬೆಂಗಳೂರಿಗೆ ಜೂನ್‌ 16ರಂದು ಬಂದಿದ್ದ ವಾಸಂತಿ ಅವರು, ಕಸ್ತೂರಿನಗರದ ಮನೆಯಲ್ಲಿದ್ದರು. ಕೆಲ ಹೊತ್ತಿನ ಬಳಿಕ ತರಕಾರಿ ತರಲು ಮನೆಯಿಂದ ಹೊರಗಡೆ ಹೋಗಿದ್ದಾರೆ. ಮನೆಯ ರಸ್ತೆ ಗೊತ್ತಾಗದೆ ಠಾಣೆ ವ್ಯಾಪ್ತಿಯ ಚಾರ್ಲಸ್‌ ಶಾಲೆ ಬಳಿ ನಿತ್ರಾಣಗೊಂಡು ಕುಳಿತಿದ್ದರು. ವೃದ್ಧೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಜಯಣ್ಣ, ಮಲ್ಲಪ್ಪ ಸಂತಿ ಮಹಿಳೆ ಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿದ್ದ ಎಎಸ್‌ಐ ಸುಂದರ್‌ರಾಜ್‌ ಮಹಿಳೆಯನ್ನು ವಿಚಾರಿಸಿ, ಬಳಿಕ ತಮಿಳುನಾಡಿನ ಹರಣಿ ಠಾಣೆಗೆ ಕರೆ ಮಾಡಿ, ವಾಸಂತಿ ಅವರ ಪತಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರಿಂದ ಪುತ್ರ ರಾಜೇಶ್‌ ಮೊಬೈಲ್‌ ನಂಬರ್‌ ಸಂಗ್ರಹಿಸಿ ಠಾಣೆಗೆ ಕರೆಸಿಕೊಂಡು ಪುತ್ರ ಮತ್ತು ಸೊಸೆ ಜತೆ ವಾಸಂತಿ ಅವರನ್ನು ಕಳುಹಿಸಿದ್ದಾರೆ.

ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಎಎಸ್‌ಐ ಸುಂದರ್‌ ರಾಜ್‌, ಸಿಬ್ಬಂದಿ ಜಯಣ್ಣ, ಮಲ್ಲಪ್ಪ ಸಂತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next