ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಬೇಸತ್ತ ತಾಯಿ, ತನ್ನ ಮೂರು ವರ್ಷದ ಮಗಳನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಇಲ್ಲಿನ ಚೆನ್ನಸಂದ್ರದ ಮಂತ್ರಿ ಅಲ್ಫಿಯನ್ ಅಪಾರ್ಟ್ಮೆಂಟ್ ವಾಸಿ ದೀಪಾ (31), ರಿಯಾ(3) ಮೃತರು. ದೀಪಾ ತನ್ನ ಮೂರುವರೆ ವರ್ಷದ ರಿಯಾಳನ್ನು ವೇಲಿನಿಂದ ಸೀಲಿಂಗ್ ಫ್ಯಾನಿಗೆ ನೇಣು ಹಾಕಿ ಕೊಲೆ ಮಾಡಿ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೀಪಾ ಅವರು ಕಳೆದ ಒಂದು ವಾರದಿಂದ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ನೋವನ್ನು ಅನುಭವಿಸದೇ ಅವರು ಈ ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ದೀಪಾ ಅವರು ಆತ್ಮಹತ್ಯೆಗೆ ಮುನ್ನ ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ, ಜೀವನವು ಕೊಳಕುಗಳಿಂದ ತುಂಬಿದೆ ಎಂದು ನಾನು ಭಾವಿಸಿದೆ, ಕ್ಷಮಿಸಿ ತಾಯಿ ಮತ್ತು ದಿವ್ಯಾ ಲವ್ ಯು ಸೋನಾ ಎಂದು ಪತ್ರ ಬರೆದಿದ್ದಾರೆ.
Related Articles
ಈ ಸಂಬಂಧ ದೀಪಾ ಅವರ ಪತಿ ಆದರ್ಶ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿ ಕೊಂಡಿರುವ ರಾಜರಾಜೇಶ್ವರಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.