Advertisement

ಗಂಡ ಮಾಡಿದ ಸಾಲಕ್ಕೆ ಹೆದರಿ‌ ಆತ್ಮಹತ್ಯೆಗೆ ಶರಣಾದ ತಾಯಿ -ಮಗಳು

04:07 PM Sep 07, 2021 | keerthan |

ಶಿವಮೊಗ್ಗ: ಗಂಡ ಮಾಡಿದ ಸಾಲದ ವಿಚಾರ ತಿಳಿದು ಮಾನಸಿಕವಾಗಿ ಕುಗ್ಗಿದ ಮಹಿಳೆ ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ‌ ನಡೆದಿದೆ.

Advertisement

ಸಂಗೀತಾ (35 ವ) ಹಾಗೂ ಮಧುಶ್ರೀ (11 ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಇದನ್ನೂ ಓದಿ:ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕಿ ಹಾಗೂ 14 ವರ್ಷದ ಮಗನ ಹತ್ಯೆ : ಪೊಲೀಸರಿಂದ ಶೋಧ ಕಾರ್ಯ

ಸಂಗೀತಾ ಪತಿ ಧನಶೇಖರ್ ಅವರು ಹೋಲ್ ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕೋವಿಡ್ ಬಂದ ಬಳಿಕ ಧನಶೇಖರ್ ವ್ಯವಹಾರದಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ‌ ಸಾಕಷ್ಟು ಸಾಲವನ್ನೂ ಮಾಡಿದ್ದರು. ಪತಿ ಸಾಲ ಮಾಡಿದ ವಿಷಯ ತಿಳಿದಿದ್ದ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗಿದೆ.

ಸಾಲಕ್ಕೆ ಹೆದರಿದ ಸಂಗಿತಾ ತನ್ನ ಮಗಳು ಮಧುಶ್ರೀಗೆ ಸೀರೆಯ ಒಂದು ಬದಿಯಿಂದ ನೇಣುಹಾಕಿ ಬಳಿಕ ಸೀರೆಯ ಇನ್ನೊಂದು ಬದಿಯಿಂದ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next