ಚಿಕ್ಕಮಗಳೂರು : ಕಳೆದ ಚುನಾವಣೆಯಲ್ಲಿ ನಾನು ಸಾಕಷ್ಟು ನೊಂದಿದ್ದೇನೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಪಕ್ಷದ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಮೋಟಮ್ಮ ಚುನಾವಣೆ ಎನ್ನುವುದು ನಮ್ಮ ಪಾಲಿಗೆ ಚುನಾವಣೆ ದುಸ್ತರವಾಗಿದೆ, ಮುಂದಿನ ದಿನಗಳಲ್ಲಿ ನಮ್ಮಂತವರು ಚುನಾವಣೆ ಎದುರಿಸುವುದು ತುಂಬಾ ಕಷ್ಟದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಕಳೆದ ಬಾರಿಯ ಚುನಾವಣೆಯಲ್ಲೇ ನಾನು ಸಾಕಷ್ಟು ನೊಂದಿದ್ದೇನೆ ಅಲ್ಲದೆ ಚುನಾವಣೆ ವೆಚ್ಚ ಭರಿಸಲು ನನ್ನ ಮನೆಯನ್ನೇ ಭೋಗ್ಯಕ್ಕೆ ನೀಡಿ ನಾನು ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಜೀವನದಲ್ಲಿ ಇದುವರೆಗೆ ಎಂಟು ಚುನಾವಣೆಗಳನ್ನು ಎದುರಿಸಿದ್ದೇನೆ ಆದರೆ ೨೦೧೮ ರಲ್ಲಿ ನಡೆದ ಚುನಾವಣೆ ನನ್ನ ಜೀವಮಾನದಲ್ಲಿ ನೋಡಲಿಲ್ಲ ಎಂದು ಆಡಳಿತ ಪಕ್ಷದ ನಾಯಕರ ವಿರುದ್ಧ ಬೇಸರವನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಎರಡು ರೋಡ್ ಶೋಗಳಲ್ಲಿ ಪ್ರಧಾನಿ ಭಾಗಿ ಸಾಧ್ಯತೆ; ಅಗತ್ಯ ಸಿದ್ಧತೆ
ಮುಂದಿನ ದಿನಗಳಲ್ಲಿ ನನ್ನ ಮಗಳಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ ಅವರು ಬಿಜೆಪಿಯವರ ಕೈ-ಬಾಯಿ ಸರಿ ಇಲ್ಲ ಎಂದು ಗೊತ್ತಾದ ಮೇಲೆ ಮತ್ತೆ ಅವರ ಸ್ನೇಹ ಬೆಳೆಸುವುದು ಸರಿಯಲ್ಲ ಹಾಗಂತ ಅಲ್ಲಿ ಮೇವು ಸಿಗುತ್ತೆ ಅಂತ ನಮ್ಮ ಪಕ್ಷದವರೇ ಕೆಲವರು ಬಿಜೆಪಿ ಸೇರಿದ್ದಾರೆ ಎಂದರು. ಕುಮಾರಸ್ವಾಮಿಗೆ ಟಿಕೆಟ್ ಕೊಡುವ ಬದಲು ಕಾಂಗ್ರೆಸ್ ನ ಬೂತ್ ಕಾರ್ಯಕರ್ತನಿಗೆ ನೀಡಲಿ ಎಂದರು, ಸಿದ್ದರಾಮಯ್ಯ ಹಿಂದೆ ನಾನೂ ಇದ್ದೇ ಅವರ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದೆ ಆದರೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ನನ್ನನ್ನ ಕಡೆಗಣಿಸಿದರು, ಆ ವೇಳೆ ಮಹಿಳಾ ಕೋಟದಲ್ಲಿ ನನಗೆ ಸಚಿವ ಸ್ಥಾನ ನೀಡಬಹುದಿತ್ತು.. ಆದರೆ ಸಿದ್ದರಾಮಯ್ಯ ಸಂತೆಯಲ್ಲಿ ಮೆಂತೆ ಕದ್ದವರೆಂದು ನನ್ನ ಆತ್ಮಕಥೆಯಲ್ಲಿ ಬರೆದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.