Advertisement

ಜೆಡಿಎಸ್‌ನಲ್ಲಿ ಬಹುತೇಕ ಮಂದಿಗೆ ಟಿಕೆಟ್‌ ಖಾತ್ರಿ

06:25 AM Dec 10, 2017 | |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನವೇ ಆಯ್ದ ಕ್ಷೇತ್ರಗಳ ಟಿಕೆಟ್‌ ಪಕ್ಕಾ ಮಾಡಿರುವ ಜೆಡಿಎಸ್‌ ತತಕ್ಷಣದಿಂದಲೇ ಕೆಲಸ ಪ್ರಾರಂಭಿಸುವಂತೆ ಗ್ರೀನ್‌ ಸಿಗ್ನಲ್‌ ನೀಡಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ 65 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮತದಾರರ ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.

“ಮಿಷನ್‌ 113′ ಕಾರ್ಯಾಚರಣೆಯಡಿ ಶ್ರಮ ಹಾಕಿದರೆ ಜೆಡಿಎಸ್‌ ಗೆಲ್ಲಬಹುದಾದ ಎ ಕೆಟಗೆರಿಯ 75 ಕ್ಷೇತ್ರಗಳನ್ನು  ಈಗಾಗಲೇ ಗುರುತಿಸಿರುವ ಎಚ್‌.ಡಿ.ಕುಮಾರಸ್ವಾಮಿ ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಫೈನಲ್‌ ಮಾಡಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಎರಡನೇ ಹಾಗೂ ಮೂರನೇ ಹಂತದ ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಆ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೆಲಸ ಪ್ರಾರಂಭಿಸುವಂತೆ ಸೂಚಿಸಲಾಗಿರುವ ಅಭ್ಯರ್ಥಿಗಳ ಬಗ್ಗೆ ಆಯಾ ಕ್ಷೇತ್ರಗಳಲ್ಲಿ ಏನಾದರೂ ತೀವ್ರ ವಿರೋಧ ವ್ಯಕ್ತವಾದರೆ ಬದಲಾವಣೆ ಹೊರತುಪಡಿಸಿ ಬೇರೆ ಯಾವುದೇ ಒತ್ತಡ ಅಥವಾ ಲಾಬಿಗೆ ಮಣಿಯದೆ ಅಂತಿಮ ಕ್ಷಣದಲ್ಲಿ ಟಿಕೆಟ್‌ ಘೋಷಣೆ ಮಾಡುವ ಪದ್ಧತಿ  ಈ ಬಾರಿಯ ಚುನಾವಣೆಯಲ್ಲಿ ಇರಲೇಕೂಡದು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಹ ಕುಮಾರಸ್ವಾಮಿಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.

ಜೆಡಿಎಸ್‌ಕಳೆದ ಬಾರಿ ಗೆಲುವು ಸಾಧಿಸಿದ್ದ 40 ಕ್ಷೇತ್ರಗಳ ಪೈಕಿ  ಈ ಬಾರಿಯೂ 36 ಕ್ಷೇತ್ರ ಗೆಲ್ಲುವ ಭರವಸೆ ಇಟ್ಟುಕೊಂಡಿರುವ ಕುಮಾರಸ್ವಾಮಿ 33 ಹಾಲಿ ಶಾಸಕರಿಗೂ ಟಿಕೆಟ್‌ ಕೊಡಲು ನಿರ್ಧರಿಸಿದ್ದು,  ಈಗಾಗಲೇ ಜೆಡಿಎಸ್‌ ಶಾಸಕರು ಇರುವ ಕ್ಷೇತ್ರ ಹೊರತುಪಡಿಸಿ ಕಾಗವಾಡ, ದೇವರಹಿಪ್ಪರಗಿ, ಸಿಂಧಗಿ, ಅಫ‌jಲಪುರ, ಆಳಂದ, ಚಿಂಚೋಳಿ, ಗುರುಮಿಟ್ಕಲ್‌, ಬೀದರ್‌ ದಕ್ಷಿಣ, ಹುಬ್ಬಳ್ಳಿ-ಧಾರವಾಡ ಪೂರ್ವ, ಕಾರವಾರ, ಸಿರಸಿ, ಚಿತ್ರದುರ್ಗ, ಹಿರಿಯೂರು, ಶಿವಮೊಗ್ಗ, ಚಿಕ್ಕಮಗಳೂರು, ತಿಪಟೂರು, ತುಮಕೂರು ನಗರ , ತುಮಕೂರು ಗ್ರಾಮಾಂತರ, ಸಿರಾ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಕೋಲಾರ, ಯಶವಂತಪುರ, ರಾಜರಾಜೇಶ್ವರಿನಗರ, ಹೆಬ್ಟಾಳ, ಬಸವನಗುಡಿ, ದೊಡ್ಡಬಳ್ಳಾಪುರ, ಚನ್ನಪಟ್ಟಣ,  ಮೇಲುಕೋಟೆ, ಮಳವಳ್ಳಿ,ಬೇಲೂರು ವಿರಾಜಪೇಟೆ, ಹುಣಸೂರು, ಕೃಷ್ಣರಾಜ, ಟಿ.ನರಸೀಪುರ, ಸೇರಿ 40 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು ಅಲ್ಲಿ ಗೆಲ್ಲುವ ಲೆಕ್ಕಾಚಾರದೊಂದಿಗೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು  ಫೈನಲ್‌ ಮಾಡಿದ್ದಾರೆ.

Advertisement

2013 ರ ಚುನಾವಣೆಯಲ್ಲಿ  323 ಮತಗಳ ಅಂತರದಿಂದ ಹದಿನೈದು ಸಾವಿರ ಅಂತರದವರೆಗೆ ಸೋಲು ಆನುಭವಿಸಿದ 48 ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿದ 12 ಕ್ಷೇತ್ರಗಳು ಇದರಲ್ಲಿ ಸೇರಿವೆ.

ಪ್ರಮುಖ ಕ್ಷೇತ್ರಗಳಲ್ಲಿ ಫೈನಲ್‌ ಮಾಡಿರುವ ಅಭ್ಯರ್ಥಿಗಳು ಹಾಗೂ ಹಾಲಿ ಶಾಸಕರಿಗೆ ಕೆಲಸ  ಪ್ರಾರಂಭಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ  ಕೆಲಸ ಪ್ರಾರಂಭಿಸಲು ಹೇಳಿರುವ ಅಭ್ಯರ್ಥಿಗಳು ಸೇರಿದಂತೆ 100 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಲಾಗಿದೆ.

ಫೈನಲ್‌ಗೊಂಡಿರುವ ಅಭ್ಯರ್ಥಿಗಳು ?
*ಬಸವಕಲ್ಯಾಣ- ಮಲ್ಲಿಕಾರ್ಜುನ ಖೂಬಾ
*ರಾಯಚೂರು-ಡಾ.ಶಿವರಾಜ್‌ ಪಾಟೀಲ್‌
*ಲಿಂಗಸಗೂರು-ಮಾನಪ್ಪ ವಜ್ಜಲ್‌
*ಹರಿಹರ- ಎಚ್‌.ಎಸ್‌.ಶಿವಶಂಕರ್‌
*ಶಿವಮೊಗ್ಗ ಗ್ರಾಮಾಂತರ- ಶಾರಧಾ ಪೂರ್ಯ ನಾಯಕ್‌
*ಭದ್ರಾವತಿ-ಅಪ್ಪಾಜಿ
*ಸೊರಬ-ಮಧು ಬಂಗಾರಪ್ಪ
*ಮೂಡಿಗೆರೆ- ಬಿ.ಬಿ.ನಿಂಗಯ್ಯ
*ಕಡೂರು-ವೈಎಸ್‌ವಿ ದತ್ತ
*ಚಿಕ್ಕನಾಯಕನಹಳ್ಳಿ-ಸುರೇಶ್‌ಬಾಬು
*ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
*ಕುಣಿಗಲ್‌-ಡಿ.ನಾಗರಾಜಯ್ಯ
*ಕೊರಟಗೆರೆ-ಸುಧಾಕರ್‌ ಲಾಲ್‌
*ಗುಬ್ಬಿ-ವಾಸು
*ಪಾವಗಡ-ತಿಮ್ಮರಾಯಪ್ಪ
*ಶಿಡ್ಲಘಟ್ಟ-ರಾಜಣ್ಣ
*ಚಿಂತಾಮಣಿ-ಜಿ.ಕೆ.ಕೃಷ್ಣಾರೆಡ್ಡಿ
*ಮಾಲೂರು-ಮಂಜುನಾಥಗೌಡ
*ಮಹಾಲಕ್ಷ್ಮಿ ಲೇ ಔಟ್‌- ಗೋಪಾಲಯ್ಯ
*ದೇವನಹಳ್ಳಿ-ಪಿಳ್ಳಮುನಿಶಾಮಪ್ಪ
*ನೆಲಮಂಗಲ-ಡಾ.ಶ್ರೀನಿವಾಸಮೂರ್ತಿ
*ರಾಮನಗರ-ಎಚ್‌.ಡಿ.ಕುಮಾರಸ್ವಾಮಿ
*ಮದ್ದೂರು-ಡಿ.ಸಿ.ತಮ್ಮಣ್ಣ
*ಕೃಷ್ಣರಾಜಪೇಟೆ-ನಾರಾಯಣಗೌಡ
*ಶ್ರವಣಬೆಳಗೊಳ-ಸಿ.ಎನ್‌.ಬಾಲಕೃಷ್ಣ
*ಅರಸೀಕೆರೆ-ಶಿವಲಿಂಗೇಗೌಡ
*ಹಾಸನ-ಪ್ರಕಾಶ್‌
*ಹೊಳೇನರಸೀಪುರ-ಎಚ್‌.ಡಿ.ರೇವಣ್ಣ
*ಸಕಲೇಶಪುರ-ಎಚ್‌.ಕೆ.ಕುಮಾರಸ್ವಾಮಿ
*ಕೃಷ್ಣರಾಜನಗರ-ಸಾ.ರಾ.ಮಹೇಶ್‌
*ಹೆಗ್ಗಡದೇವನಗೋಟೆ- ಚಿಕ್ಕಮಾದು
*ಚಾಮುಂಡೇಶ್ವರಿ-ಜಿ.ಟಿ.ದೇವೇಗೌಡ
*ನವಲಗುಂದ- ಕೋನರೆಡ್ಡಿ
*ದೇವರಹಿಪ್ಪರಗಿ-ಎ.ಎಸ್‌.ಪಾಟೀಲ್‌ ನಡಹಳ್ಳಿ
*ಸಿಂಧಗಿ-ಎಂ.ಸಿ.ಮನಗೋಳಿ
*ಬೀದರ್‌ ದಕ್ಷಿಣ-ಬಂಡೆಪ್ಪ ಕಾಶಂಪುರ್‌
*ಶಿವಮೊಗ್ಗ-ಶ್ರೀಕಾಂತ್‌
*ಶ್ರೀಂಗೇರಿ-ಎಚ್‌.ಜಿ. ವೆಂಕಟೇಶ್‌
*ತಿಪಟೂರು-ಲೋಕೇಶ್ವರ್‌
*ತುಮಕೂರು-ಗೋವಿಂದರಾಜ್‌
*ತುಮಕೂರು ಗ್ರಾಮಾಂತರ-ಗೌರಿಶಂಕರ
*ಸಿರಾ-ಸತ್ಯನಾರಾಯಣ
*ಶ್ರೀನಿವಾಸಪುರ-ವೆಂಕಟಶಿವಾರೆಡ್ಡಿ
*ಯಶವಂತಪುರ-ಟಿ.ಎನ್‌.ಜವರಾಯಿಗೌಡ
*ಹೆಬ್ಟಾಳ-ಹನುಮಂತೇಗೌಡ
*ದೊಡ್ಡಬಳ್ಳಾಪುರ-ಮುನೇಗೌಡ
*ಚೆನ್ನಪಟ್ಟಣ- ಅನಿತಾ ಕುಮಾರಸ್ವಾಮಿ
*ಕನಕಪುರ-ವಿಶ್ವನಾಥ್‌
*ಮಾಗಡಿ- ಎ.ಮಂಜು
*ಮಳವಳ್ಳಿ-ಡಾ.ಅನ್ನಾದಾನಿ
*ಮಂಡ್ಯ-ಎಂ.ಶ್ರೀನಿವಾಸ್‌
*ಅರಕಲಗೂಡು-ಎ.ಟಿ.ರಾಮಸ್ವಾಮಿ
*ಪಿರಿಯಾಪಟ್ಟಣ-ಮಹದೇವ್‌
*ನರಸಿಂಹರಾಜ-ಸಂದೇಶಸ್ವಾಮಿ
*ಹುಬ್ಬಳ್ಳಿ-ಧಾರವಾಡ ಪೂರ್ವ-ಹಲ್ಕೋಡ್‌ ಹನುಮಂತಪ್ಪ
*ಸಿರಸಿ-ಶಶಿಭೂಷಣ ಹೆಗಡೆ
*ಗುರುಮಿಟ್ಕಲ್‌-ನಾಗನಗೌಡ
*ಚಿಂಚೋಳಿ-ಸುಶೀಲಾಬಾಯಿ
*ಚಾಮರಾಜ-ಪ್ರೊ.ರಂಗಪ್ಪ
*ಪದ್ಮನಾಭನಗರ-ಗೋಪಾಲ್‌
*ಶ್ರೀರಂಗಪಟ್ಟಣ-ರವೀಂದ್ರ ಶ್ರೀಕಂಠಯ್ಯ
*ಮೇಲುಕೋಟೆ- ಸಿ.ಎಸ್‌.ಪುಟ್ಟರಾಜು
*ಸರ್ವಜ್ಞ ನಗರ- ಅನ್ವರ್‌ ಅಲಿ
*ಮಧುಗಿರಿ- ವೀರಭದ್ರಯ್ಯ
*ಗಾಂಧಿನಗರ- ನಾರಾಯಣಸ್ವಾಮಿ

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next