Advertisement
ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿಭಾಗವಹಿಸಿದ್ದ ಬಳಿಕ ಸುದ್ದಿಗಾರರೊಂದಿಗೆ ಅವರುಮಾತನಾಡಿ, ಸೋಂಕು ತಡೆಗೆ ಕಠಿಣ ಕ್ರಮಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆ ತಾಲೂಕುಗಳಲ್ಲಿ ಲಾಕ್‌ಡೌನ್ ಕ್ರಮ ಮತ್ತಷ್ಟು ಬಿಗಿಗೊಳಿಸುವಸಂಬಂಧ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದುಹೇಳಿದರು.
Related Articles
Advertisement
ಜಿಲ್ಲಾಡಳಿತ ಅನುಮತಿ: ಕೊರೊನಾ ಗ್ರಾಮ ಮಟ್ಟದಟಾಸ್ಕ್ಪೋರ್ಸ್‌ನಲ್ಲಿ ಪಕ್ಷಭೇದ ಮರೆತು ಕೈಜೋಡಿಸಬೇಕು. ಕೊರೊನಾ ಮುಕ್ತ ಗ್ರಾಮವಾಗಿಸಲು ಗುರಿನೀಡಲಾಗುವುದು. ಖಾಸಗಿ ಕೋವಿಡ್ ಕೇರ್‌ಸೆಂಟರ್ ನೀಡಲು ಸರಕಾರ, ಜಿಲ್ಲಾಡಳಿತವುಅನುಮತಿ ನೀಡಲಿದೆ ಎಂದು ವಿವರಿಸಿದರು.
ಗೌರವ ಧನ: ಅಸೋಷಿಯೇಷನ್, ಎನ್‌ಜಿಒ,ಆಶ್ರಮ ಸೇರಿ ಯಾರೇ ಮುಂದೆ ಬಂದರೂಅನುಮತಿ ನೀಡಲಾಗುವುದು. ನಂಬಿಕೆಗೆ ಇಂತಹಸಂಸ್ಥೆಗಳು ಅರ್ಹರಾಗಿರುವ ಹಿನ್ನೆಲೆಯಲ್ಲಿ ಬಳಕೆಮಾಡಿಕೊಳ್ಳಲಾಗುತ್ತಿದ್ದು, ಆರೋಗ್ಯ ಸೇವೆಗೆ ಅವರುಬಳಸಿಕೊಳ್ಳುವ ವೈದ್ಯರು, ಸಿಬ್ಬಂದಿಗೆ ಗೌರವ ಧನವನ್ನುನೀಡಲು ಸರಕಾರ ಸಿದ್ಧವಾಗಿದೆ ಎಂದು ತಿಳಿಸಿದರು.
ಕೇರ್ ಸೆಂಟರ್: ಅಲ್ಲದೆ, ಕೋವಿಡ್ ಸಂದರ್ಭದಲ್ಲಿ 30 ಕಂಪನಿಗಳು ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಸೇವೆಯಡಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲು ಡೀಸಿ ಸೂಚನೆ ನೀಡಲಿದ್ದಾರೆ. ಒಂದು ವೇಳೆ ಹೆಚ್ಚಿನಮಂದಿಗೆ ಪಾಸಿಟಿವ್ ಬಂದರೆ ಅಲ್ಲಿಯೇ ಕೋವಿಡ್‌ಕೇರ್ ಸೆಂಟರ್ ಆರಂಭಿಸಲು ಸೂಚಿಸಲಾಗುವುದುಎಂದು ಹೇಳಿದರು.
ವಿಡಿಯೋ ಸಂವಾದದಲ್ಲಿ ಡೀಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್,ಎಸ್ಪಿಗಳಾದ ಕೋಲಾರ ಕಾರ್ತಿಕ್‌ರೆಡ್ಡಿ, ಕೆಜಿಎಫ್‌ಇಲಕ್ಕಿಯಾ ಕರುಣಾಕರನ್, ಎಡೀಸಿ ಡಾ.ಸ್ನೇಹಾ,ತಹಶೀಲ್ದಾರ್ ಶೋಭಿತಾ ಉಪಸ್ಥಿತರಿದ್ದರು.