ಹೊಸದಿಲ್ಲಿ: ದೇಶದ ಉತ್ತರ ಭಾಗದಲ್ಲಿ ದಿನ ಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ.
ಅದಕ್ಕೆ ಪೂರಕವಾಗಿ ಜಗತ್ತಿನ ಅತ್ಯಧಿಕ ತಾಪ ಮಾನ ಇರುವ 15 ಸ್ಥಳಗಳಲ್ಲಿ ಹತ್ತು ಸ್ಥಳಗಳು ಭಾರತದಲ್ಲಿಯೇ ಇವೆ ಎಂದು ಅಧ್ಯಯನವೊಂದು ಹೇಳಿದೆ.
ಮಂಗಳವಾರ ರಾಜಸ್ಥಾನದ ಚುರುವಿನಲ್ಲಿ ಅತ್ಯಂತ ಹೆಚ್ಚು ಅಂದರೆ 50 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು. ಬುಧವಾರ ಕೂಡ ಅಲ್ಲಿ 49.6 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಹತ್ತು ವರ್ಷಗಳಿಂದ ಈಚೆಗೆ ಜಿಲ್ಲೆಯಲ್ಲಿ ಗೊತ್ತಾಗಿರುವ 2ನೇ ಅತ್ಯಧಿಕ ಹೆಚ್ಚಿನ ತಾಪಮಾನ. ರಾಜಧಾನಿ ಹೊಸದಿಲ್ಲಿಯಲ್ಲಿ ಕೂಡ ಬಿಸಿ ಗಾಳಿ ಬೀಸಿದೆ.
ದೇಶದ ಉತ್ತರ ಹಾಗೂ ಮಧ್ಯಭಾಗದಲ್ಲಿ ಆರಂಭವಾಗಿರುವ ಬಿಸಿ ಗಾಳಿ ಗುರುವಾರವೂ ಮುಂದುವರಿಯಲಿದೆ ಎಂದು ಭಾರ ತೀಯ ಹವಾಮಾನ ಇಲಾಖೆ ಹೇಳಿದೆ. ಬಂಗಾಲ ಕೊಲ್ಲಿ ಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿರುವಂತೆಯೇ ಈ ಬೆಳವ ಣಿಗೆ ನಡೆದಿದೆ.
ಉತ್ತರ ಮತ್ತು ಕೇಂದ್ರ ಭಾಗದಲ್ಲಿ ಭಾರೀ ಪ್ರಮಾಣದ ಬಿಸಿ ಗಾಳಿ ಬೀಸುತ್ತಿದೆ. ಇದೇ 29, 30ರಂದು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಧೂಳುಮಿಶ್ರಿತ ಗಾಳಿ ಬೀಸಲಿದೆೆ. ಇದೇ ವೇಳೆ ಅಸ್ಸಾಂನಲ್ಲಿ ಭಾರಿ ಪ್ರವಾಹದಿಂದಾಗಿ 9 ಜಿಲ್ಲೆಗಳ 2 ಲಕ್ಷಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿದೆ. ಹಠಾತ್ತನೇ ಬಂದ ಪ್ರವಾಹದಿಂದಾಗಿ ಬೆಳೆಗಳ ಮೇಲೂ ಸಾಕಷ್ಟು ಪರಿಣಾಮ ಬೀರಿದ್ದು, ಸುಮಾರು 1007 ಹೆಕ್ಟೇರ್ ಹೊಲಗಳು ನೀರಿನಲ್ಲಿ ಮುಳುಗಿವೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.