Advertisement

ಮದುವೆ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ ಅಬ್ಬರ…ಹೃದಯಾಘಾತದಿಂದ 63 ಕೋಳಿ ಸಾವು! ದೂರು

05:37 PM Nov 24, 2021 | Team Udayavani |

ನವದೆಹಲಿ: ನೆರಮನೆಯಲ್ಲಿನ ಮದುವೆ ಸಂದರ್ಭದಲ್ಲಿ ಬಳಸಿದ ಡಿಜೆ ಸೌಂಡ್ಸ್ ಪರಿಣಾಮವಾಗಿ ತನ್ನ ಫಾರ್ಮ್ ನಲ್ಲಿನ 63 ಕೋಳಿಗಳು ಸಾವನ್ನಪ್ಪಿರುವುದಾಗಿ ಒಡಿಶಾದ ಬಾಲಾಸೋರ್ ನಲ್ಲಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

Advertisement

ಇದನ್ನೂ ಓದಿ:ಶಿವಮೊಗ್ಗದಲ್ಲಿ ಸಂಪತ್ತಿನ ಭಾರಿ ಕೃಷಿ ಮಾಡಿದ ಅಧಿಕಾರಿ: ಎಸಿಬಿ ಸುಸ್ತು!

ಕಂದಗರಡಿ ಗ್ರಾಮದ ನಿವಾಸಿ, ಕೋಳಿ ಫಾರಂ ಮಾಲೀಕ ರಂಜಿತ್ ಪರಿದಾ ಅವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನ ಪ್ರಕಾರ, ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆಯ ಮೆರವಣಿಗೆಯಲ್ಲಿ ಬಳಸಿದ ಡಿಜೆ ಸೌಂಡ್ಸ್ ನಿಂದ ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ದೂರಿದ್ದಾರೆ.

 

ಶನಿವಾರ 11.30ರ ಹೊತ್ತಿಗೆ ಡಿಜೆ ಬ್ಯಾಂಡ್ ಸೌಂಡ್ ನೊಂದಿಗೆ ಮದುವೆ ಮೆರವಣಿಗೆ ತಮ್ಮ ಕೋಳಿ ಫಾರ್ಮ್ ಸಮೀಪದಿಂದಲೇ ಹಾದು ಹೋಗಿತ್ತು. ಡಿಜೆ ಬ್ಯಾಂಡ್ ಫಾರ್ಮ್ ಬಳಿ ಬಂದಾಗ, ಕೋಳಿಗಳು ಎಗರಿ ಹಾರಲು ಆರಂಭಿಸಿದ್ದವು. ನಂತರ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.

Advertisement

ಡಿಜೆ ಸೌಂಡ್ಸ್ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡರೂ ಕೇಳಲಿಲ್ಲ. ಭಾರೀ ಶಬ್ದದ ಪರಿಣಾಮ 63 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪುವಂತಾಗಿದೆ ಎಂದು ರಂಜಿತ್ ಅಲವತ್ತುಕೊಂಡಿದ್ದಾರೆ. ಕೋಳಿಗಳನ್ನು ಪರೀಕ್ಷಿಸಿದ ಪಶುವೈದ್ಯಾಧಿಕಾರಿ ಕೂಡಾ ಭಾರೀ ಶಬ್ದದ ಶಾಕ್ ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆಂದು ವರದಿ ವಿವರಿಸಿದೆ.

ರಂಜಿತ್  ಇಂಜಿನಿಯರಿಂಗ್ ಪದವೀಧರನಾಗಿದ್ದು, ಯಾವುದೇ ಉದ್ಯೋಗ ಸಿಗದ ಪರಿಣಾಮ 2019ರಲ್ಲಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಎರಡು ಲಕ್ಷ ರೂಪಾಯಿ ಸಾಲ ಪಡೆದು ಕೋಳಿ ಫಾರ್ಮ್ ಆರಂಭಿಸಿರುವುದಾಗಿ ವರದಿ ತಿಳಿಸಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎರಡೂ ಕಡೆಯವರನ್ನು ಕರೆಯಿಸಿ ರಾಜಿ ಸಂಧಾನ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next