Advertisement
ಇನ್ನು ಕಿಚ್ಚ ಸುದೀಪ್ ಅಭಿಮಾನಿಗಳಂತೂ ನಾಳೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ಟ್ವಿಟ್ಟರ್ ಪುಟಗಳಲ್ಲಂತೂ #Pailwaan ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಮತ್ತು ಸ್ಯಾಂಡಲ್ ವುಡ್ ತಾರೆಯರೂ ಸೇರಿದಂತೆ ಹಲವರು ಪೈಲ್ವಾನ್ ಚಿತ್ರಕ್ಕೆ ಶುಭ ಕೋರುವ ಟ್ವೀಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಇನ್ನು ಕಿಚ್ಚನ ಅಭಿಮಾನಿಗಳಂತೂ ಶುಭಾಶಯ ಕೋರುವುದರ ಜೊತೆಗೆ ಪೈಲ್ವಾನ್ ಚಿತ್ರದ ಪ್ರಥಮ ಪ್ರದರ್ಶನವನ್ನು ಸಂಭ್ರಮಿಸಲು ನಡೆಸಿರುವ ತಯಾರಿಯ ಫೊಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ವಿಶೇಷವೆಂದರೆ ಪೈಲ್ವಾನ್ ಚಿತ್ರದ ಕುರಿತು ಹಾಕಲಾಗುತ್ತಿರುವ ಬಹುತೇಕ ಎಲ್ಲಾ ಪೋಸ್ಟ್ ಗಳಿಗೆ ಸ್ವತಃ ಕಿಚ್ಚ ಸುದೀಪ್ ಅವರೇ ಮರುಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸುತ್ತಿರುವುದು ಇನ್ನೊಂದು ವಿಶೇಷ. ದೇಸೀ ಲುಕ್ ನಲ್ಲಿ ಮಿಂಚುತ್ತಿರುವ ಶೆಟ್ರ ಪಾತ್ರ ಈಗಾಗಲೇ ಚಿತ್ರರಸಿಕರ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರ್ ಎನ್ನುವ ಹಿಂದಿ ಟ್ಟಿಟ್ಟರ್ ಮೂಲಕ ಸುನಿಲ್ ಶೆಟ್ಟಿ ಅವರಿಗೆ ಶುಭಾಶಯ ಕೋರಿರುವ ಟ್ವೀಟ್ ಒಂದು ಆಕರ್ಷಕವಾಗಿದೆ. ಬಲ್ವಾನ್ ನಿಂದ ಪ್ರಾರಂಭವಾದ ನಿಮ್ಮ ನಿನಿ ಪಯಣ ಪೈಲ್ವಾನ್ ವರೆಗೆ ಬಂದು ನಿಂತಿದೆ. ಭವಿಷ್ಯದಲ್ಲಿ ನಿಮಗೆ ಇನ್ನಷ್ಟು ಉತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಆ ಟ್ವೀಟ್ ನಲ್ಲಿ ಶುಭ ಕೋರಲಾಗಿದೆ.
Related Articles
ಕಳೆದ ವರ್ಷ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್. ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹವಾ ಎಬ್ಬಿಸಿತ್ತು. ಆ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಭರ್ಜರಿ ಓಪನಿಂಗ್ ಪಡೆದುಕೊಂಡು ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಮೆಯನ್ನು ಎತ್ತಿಹಿಡಿಯಲು ‘ಪೈಲ್ವಾನ್’ ಬರುತ್ತಿದ್ದಾನೆ. ಪೈಲ್ವಾನನ್ನು ಚಿತ್ರರಸಿಕರು ಹೇಗೆ ಬಿಗಿದಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಉತ್ತರ ಇನ್ನೇನು ಕೆಲವೇ ಗಂಟೆಗಳಲ್ಲಿ ದೊರೆಯಲಿದೆ.
Advertisement