Advertisement
ಸಾಮಾನ್ಯವಾಗಿ ಸಂಜೆಯಾದೊಡನೆ ಸೊಳ್ಳೆಗಳು ಹಿಂಡುಹಿಂಡಾಗಿ ಚಲಿಸುತ್ತವೆ. ಈ ಹೊತ್ತಿನಲ್ಲಿ ಗಂಡು ಸೊಳ್ಳೆಗಳು, ಹೆಣ್ಣು ಸೊಳ್ಳೆಗಳನ್ನು ಕೂಡಲು ಪ್ರಯತ್ನ ನಡೆಸುತ್ತವೆ. ಆಗ ಸೊಳ್ಳೆಗಳ ರೆಕ್ಕೆಬಡಿತ ಜೋರಾಗಿರುತ್ತದೆ. ಹೀಗೆ ವೇಗವಾಗಿ ರೆಕ್ಕೆ ಬಡಿದಾಗ ಬರುವ ಸದ್ದು ಬಹಳ ಸೂಕ್ಷ್ಮವಾಗಿಯೂ, ಅಷ್ಟೇ ವಿಭಿನ್ನವಾಗಿಯೂ ಇರುತ್ತವೆ. ಈ ಸದ್ದನ್ನು ಕೇಳಿಸಿಕೊಳ್ಳುವ ಮೂಲಕ ಗಂಡುಸೊಳ್ಳೆಗಳು ಸೂಕ್ತ ಸಂಗಾತಿಯನ್ನು ಸೇರಿಕೊಳ್ಳುತ್ತವೆ! ಒಂದು ವೇಳೆ ಹೀಗೊಂದು ಕೇಳಿಸಿಕೊಳ್ಳುವ ಶಕ್ತಿಯೇ ಇಲ್ಲವಾದರೆ? ಯುಸಿಎಲ್ ವಿಜ್ಞಾನಿಗಳು ಈ ದಿಕ್ಕಿನಲ್ಲಿ ಸಂಶೋಧನೆ ಶುರು ಮಾಡಿದ್ದಾರೆ.
Advertisement
ಸಂಗಾತಿಯನ್ನು ಸೇರುವ ವೇಳೆ ಸೊಳ್ಳೆಗಳ ರೆಕ್ಕೆ ಬಡಿತ ಜೋರು
08:21 PM Jan 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.