Advertisement
ಕಳೆದೊಂದು ವಾರದಿಂದ ಪಟ್ಟಣದಲ್ಲಿ ಸುರಿದ ಮಳೆ ನೀರು ಗುಂಡಿಗಳು ಮತ್ತು ತಗ್ಗು ಪ್ರದೇಶಗಳಲ್ಲಿಶೇಖರ ಣೆಯಾಗಿ ಸೊಳ್ಳಗಳ ಉತ್ಪತ್ತಿಯ ಕೇಂದ್ರವಾಗಿ ರೋಗ ರುಜಿನಗಳ ಕೇಂದ್ರಸ್ಥಾನವಾಗಿ ಪರಿಣಮಿಸಿದೆ. ಈ ಬಗ್ಗೆ ಕಳೆದ ವಾರ ಜಿಪಂ ಸಿಇಒ ಕಾಂತರಾಜುನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಪ್ರಗತಿಪರಿಶೀಲನಾ ಸಭಯಲ್ಲಿ ಪುರಸಭೆ ಸರಹದ್ದಿನಲ್ಲಿಸೊಳ್ಳೆಗಳು ಅಧಿಕವಾಗಿ ಉತ್ಪತ್ತಿಯ ತಾಣವಾಗಿದೆ.
Related Articles
Advertisement
ಆರೋಗ್ಯ ಇಲಾಖೆ ಮನೆ ಮನೆಗೆ ಭೇಟಿ:ಸೊಳ್ಳೆಗಳಿಂದ ಮಲೇರಿಯಾ, ಡೆಂ ಗೆ ಬರುತ್ತದೆ. ಈಬಗ್ಗೆ ತಾಲೂಕು ಆರೋಗ್ಯ ಇಲಾಖೆ ಪಟ್ಟಣದ ಅನೇಕಬಡವಾಣೆಗಳಿಗೆ ತೆರಳಿ ತೊಟ್ಟಿ, ಡ್ರಂಗಳಲ್ಲಿ ಶೇಖರಣೆಅಗಿರುವ ನೀರನ್ನು ಪರೀಕ್ಷಿಸಿ, ಸೊಳ್ಳಗಳ ಲಾರ್ವಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಆಡಳಿತ ಸಂಪೂರ್ಣ ಕುಂಠಿತ: ಪಟ್ಟಣದ ಪುರಸಭೆಯಲ್ಲಿನ ಆಡಳಿತ ಸಂಪೂರ್ಣ ಕುಂಠಿ ತಗೊಂಡಿದ್ದು, ಇದಕ್ಕೆ ಚುರುಕು ಗೊಳಿಸಲು ಸಾಧ್ಯವಾಗದಷ್ಟು ಹದಗೆಟ್ಟು ನಿಂತಿದೆ. ಚುರುಕು ಗೊಳಿಸಲುಪರಿಹಾರವೆಂದರೆ ಕಳೆದ ಹತ್ತಾರು ವರ್ಷದಿಂದಒಂದೇ ಸ್ಥಾನದಲ್ಲಿರುವ ಸಿಬ್ಬಂದಿ ವರ್ಗಾವಣೆಗೊಳಿಸಿ ಹೊಸದಾಗಿ ಆ ಸ್ಥಾನ ತುಂಬುವುದು ಎಂದುಹೇಳಬಹುದಾಗಿದೆ. ಆದರೆ, ಈ ಕೆಲಸವನ್ನು ಶಾಸಕಎಚ್.ಡಿ. ರೇವಣ್ಣ ಅವರಿಂದ ಮಾತ್ರ ಸಾಧ್ಯ? ಇದಕ್ಕೆಶಾಸಕರು ಮುಂದಾಗುವರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.