Advertisement

ಅಫ್ಘಾನಿಸ್ತಾನದ ಹೆರಾತ್ ಮಸೀದಿಯಲ್ಲಿ ಸ್ಫೋಟ: 15 ಮಂದಿ ಸಾವು

07:37 PM Sep 02, 2022 | Team Udayavani |

ಕಾಬೂಲ್‌: ಪಶ್ಚಿಮ ಅಫ್ಘಾನ್ ನಗರದ ಹೆರಾತ್‌ನಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 15 ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಹೆರಾತ್‌ನ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಇಂದು ಮುಸ್ಲಿಂ ಧಾರ್ಮಿಕ ವಾರದ ಪ್ರಮುಖ ದಿನವಾಗಿದ್ದು, ಮಸೀದಿಯಲ್ಲಿ ವಿಶೇಷ ಜನಸಂದಣಿಯಿತ್ತು.

ಈ ಘಟನೆಯ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಹಿಂದಿನ ಮಸೀದಿ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ನಡೆಸಿದ್ದು, ಇದು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಸರಣಿ ದಾಳಿಗಳನ್ನು ನಡೆಸಿ, ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡಿದೆ.

ಇದನ್ನೂ ಓದಿ:ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಭಾರತ ರಷ್ಯಾದ ಮನವೊಲಿಸಬೇಕು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next