Advertisement

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ: ಶಾಲಾಮಕ್ಕಳಿಗೆ ವಿಶ್ವವಿಖ್ಯಾತ ಮೋರ್ಯರಬೆಟ್ಟದ ಸಂಪೂರ್ಣ ಮಾಹಿತಿ

08:11 PM Dec 01, 2022 | Team Udayavani |

.
ಗಂಗಾವತಿ : ತಾಲೂಕಿನ ವಿಶ್ವವಿಖ್ಯಾತ ಶಿಲಾಯುಗದ ಮೋರ್ಯರ ಬೆಟ್ಟದಲ್ಲಿರುವ ಶಿಲಾಮನೆಗಳು ಮತ್ತು ಶಿಲಾಸಮಾಧಿಗಳ ಸ್ಥಳ ಯುನೆಸ್ಕೋದ ವಿಶ್ವಪರಂಪರಾ ಪಟ್ಟಿಯಲ್ಲಿ ಸೇರುವ ಸ್ಥಳಗಳಲ್ಲಿ ಸ್ಥಾನ ಪಡೆದು ಖ್ಯಾತಿ ಪಡೆದಿತ್ತು. ಇದೀಗ ಗಂಗಾವತಿ ತಾಲೂಕಿನ ಎಲ್ಲಾ ಸರಕಾರಿ ಶಾಲಾಮಕ್ಕಳನ್ನು ಮೋರ್ಯರ ಬೆಟ್ಟಕ್ಕೆ ಕರೆದೊಯ್ದು ಐತಿಹಾಸಿ ಸ್ಥಳದ ಬಗ್ಗೆ ಪೂರ್ಣ ಮಾಹಿತಿ ನೀಡುವ ವಿನೂತನ ಯೋಜನೆಯನ್ನು ತಾಲೂಕಿನ ಶ್ರೀರಾಮನಗರ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಕಿಕೊಂಡಿದೆ. ರಾಜ್ಯದಲ್ಲೇ ಮೊದಲಾಗಿರುವ ಈ ಯೋಜನೆ ಸದ್ಯ ಅಖಂಡ ಗಂಗಾವತಿ(ಕಾರಟಗಿ, ಕನಕಗಿರಿ) ತಾಲೂಕಿನ ಸರಕಾರ ಶಾಲೆಗಳ ೮ ನೇ ತರಗತಿ ಮಕ್ಕಳಿಗಾಗಿಯೇ ರೂಪಿಸಲಾಗಿದೆ.

Advertisement

ಮೋರ್ಯರ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದೆ ಶಿಲಾಯುಗದ ಜನರು ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಸಾವಿರಾರು ಶಿಲಾಮನೆಗಳು ಮತ್ತು ಶಿಲಾ ಸಮಾಧಿಗಳಿದ್ದು ಇವುಗಳ ಕುರಿತು ದೇಶ ವಿದೇಶಗಳಲ್ಲಿ ಪೂರ್ಣ ಮಾಹಿತಿ ಇದ್ದು ಪ್ರಚಾರದ ಕೊರತೆಯಿಂದಾಗಿ ಸ್ಥಳೀಯರು ಈ ಅಮೂಲ್ಯವಾದ ಸ್ಥಳವನ್ನು ವೀಕ್ಷಣೆ ಮಾಡಿಲ್ಲ.

ಕುರಿಗಾಯಿಗಳು ಮತ್ತು ದನ ಕಾಯುವವರು ಮತ್ತು ಕಟ್ಟಿಗೆ ತರುವವರು ಮತ್ತು ಬೆರಳೆಣಿಕೆಯ ಸಾಹಿತಿಗಳು ಬರಹಗಾರರಿಗೆ ಈ ಸ್ಥಳದ ಗೊತ್ತಿದೆ. ಇಂತಹ ಅಪರೂಪದ ಸ್ಮಾರಕಗಳಿರುವ ಸ್ಥಳ ವಿಶ್ವದಲ್ಲಿ ಎಲ್ಲೂ ಕಾಣಲು ಸಿಗುವುದಿಲ್ಲ. ಬೃಹತ್ ಗಾತ್ರದ ಬಂಡೆಗಲ್ಲುಗಳಿಂದ ಇಬ್ಬರು ಮನುಷ್ಯರು ನಿಲ್ಲಲು, ಕುಳಿತುಕೊಳ್ಳಲು ಮಲಗಲು ಅನುಕೂಲವಾಗುವಂತೆ ಕೋಣೆಗಳನ್ನು ನಿರ್ಮಿಸಿ ಬಾಗಿಲಿಗೆ ಹಾಸುಬಂಡೆಯ ಮಧ್ಯೆ ಕಿಂಡಿ ಕೊರೆದು ದೂರದಿಂದ ಬರುವ ಕಾಡು ಪ್ರಾಣಿಗಳು ಅಥವಾ ಇತರರನ್ನು ನೋಡಲು ಅನುಕೂಲ ಮಾಡಲಾಗಿದೆ. ಇಂತಹ ಸಾವಿರಾರು ಶಿಲಾಮನೆಗಳು ಮತ್ತು ಸಮಾಧಿಗಳಿದ್ದು ಈ ಸ್ಥಳಕ್ಕೆ ಹೋಗಿ ಬರಲು ರಸ್ತೆ ಮತ್ತು ಸಂಪರ್ಕದ ಕೊರತೆಯಿಂದ ಪ್ರವಾಸಿಗಳು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೆಲ ಸಾಹಿತಿಗಳು ಸಂಶೋಧಕರು ತೆರಳಿ ಶಿಲಾಮನೆಗಳು-ಸಮಾಧಿಗಳ ಕುರಿತು ಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. 2021-22 ನೇ ಸಾಲಿನಲ್ಲಿ ಯುನೇಸ್ಕೋ ವಿಶ್ವಪರಂಪರಾ ಪ್ರದೇಶಗಳನ್ನು ಗುರುತಿಸುವ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಮೋರ್ಯರ ಬೆಟ್ಟ ಸ್ಥಾನ ಪಡೆದಿದ್ದು ಯುನೇಸ್ಕೋ ಘೋಷಣೆ ಬಾಕಿ ಇದೆ. ಇಂತಹ ಸ್ಥಳಗಳನ್ನು ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಬೇಕಿದ್ದು ಇಲ್ಲಿ ರಸ್ತೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

ವಿ-ಪ್ರವಾಸೋದ್ಯಮದಿಂದ ಮಕ್ಕಳಿಗೆ ಪರಿಚಯಿಸುವ ಯೋಜನೆ: ಇದೀಗ ಮೋರ್ಯರ ಬೆಟ್ಟದ ಶಿಲಾಮನೆಗಳು-ಶಿಲಾಸಮಾಧಿಗಳನ್ನು ಇವುಗಳ ಇತಿಹಾಸ ಕಾಲಘಟ್ಟ ತಿಳಿಸಲು ಶ್ರೀರಾಮನಗರದ ವಿದ್ಯಾನಿಕೇತನ ಶಾಲೆ ಜಿಲ್ಲಾಡಳಳಿತ ಅನುಮತಿಯ ಮೇರೆಗೆ ಗಂಗಾವತಿ ತಾಲೂಕಿನ ಸರಕಾರಿ ಶಾಲೆಗಳ 5 ಸಾವಿರ 8 ನೇ ತರಗತಿ ಮಕ್ಕಳಿಗೆ ಮೋರ್ಯರ ಬೆಟ್ಟ ಪ್ರವಾಸ ಯೋಜನೆ ಆರಂಭಿಸಿದ್ದು ಡಿಸೆಂಬರ್ ಎರಡನೇಯ ರವಿವಾರದಿಂದ ಪ್ರತಿ ರವಿವಾರ 10 ಶಾಲಾ ಬಸ್‌ಗಳಲ್ಲಿ ಪ್ರತಿ ವಾರ 500 ವಿದ್ಯಾರ್ಥಿಗಳಂತೆ 10 ವಾರಗಳಳಲ್ಲಿ 5 ಸಾವಿರ ಮಕ್ಕಳನ್ನು ಮೋರ್ಯರ ಬೆಟ್ಟಕ್ಕೆ ಕರೆದೊಯ್ದು ಪ್ರವಾಸಿತಾಣಗಳ ಪರಿಚಯಿಸುವ ಯೋಜನೆ ಆರಂಭಿಸಿದ್ದು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಇದೇ ಪ್ರಥಮ ಭಾರಿಗೆ ಸರಕಾರಿ ಶಾಲೆಗಳ ಮಕ್ಕಳಿಗೆ ಪ್ರವಾಸಿತಾಣ ತೋರಿಸುವ ಮೂಲಕ ಐತಿಹಾಸಿಕ ಸ್ಮಾರಕಗಳ ಪರಿಚಯಿಸುವ ಕಾರ್ಯ ಸಂಘಸಂಸ್ಥೆಗಳು ಮತ್ತು ತಾಲೂಕು ಆಡಳಿತ ಶ್ಲಾಘೀಸಿದೆ.

ಮೋರ್ಯರ ಬೆಟ್ಟದ ಶಿಲಾಮನೆಗಳು ಮತ್ತು ಶಿಲಾಸಮಾಧಿಗಳು ನಮ್ಮೆಲ್ಲರ ಹೆಮ್ಮೆಯ ಕುರುಹುಗಳಾಗಿದ್ದು ಇವುಗಳನ್ನು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗುವ ನಮ್ಮ ಮಕ್ಕಳಿಗಳಿಗೆ ತೋರಿಸಿ ಇವುಗಳ ಸಂರಕ್ಷಣೆ ಹೊಣೆ ಅವರಿಗೆ ಕೊಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಸರ್ವ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರ್ಯ ಮಾಡುವ ಹಂಬಲ ಹೊಂದಿರುತ್ತವೆ. ಪ್ರತಿ ರವಿವಾರ ನಮ್ಮ ಸಂಸ್ಥೆಯ 25 ಬಸ್‌ಗಳು ಖಾಲಿ ನಿಂತಿರುತ್ತವೆ. ಇವುಗಳಲ್ಲಿ ಸರಕಾರಿ ಶಾಲೆಗಳು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೋರ್ಯರ ಬೆಟ್ಟವನ್ನು ತೋರಿಸಿ ಈ ಭಾಗದ ಪ್ರವಾಸೋದ್ಯಮವನ್ನು ಬೆಳೆಸುವ ಹಂಬಲದಿಂದ ತಾಲೂಕು, ಜಿಲ್ಲಾಡಳಿತಕ್ಕೆ ಮನವಿ ಮಾಡಿ ಪ್ರತಿ ರವಿವಾರ 500 ವಿದ್ಯಾರ್ಥಿಗಳಂತೆ 5000 ಮಕ್ಕಳನ್ನು ಪ್ರವಾಸಕ್ಕೆ ಉಪಹಾರ-ಊಟದ ಸಮೇತ ಕರೆದೊಯ್ಯುವ ಯೋಜನೆ ರೂಪಿಸಲಾಗಿದೆ. ಸಂಶೋಧಕರು, ಇತಿಹಾಸ ತಜ್ಞರು ಮತ್ತು ಸಾಹಿತಿಗಳಿಂದ ಮಕ್ಕಳಿಗೆ ಮಾಹಿತಿ ಕೊಡಿಸಲಾಗುತ್ತದೆ. ಡಿಸೆಂಬರ್ ಎರಡನೇಯ ರವಿವಾರದಿಂದ ವಿ-ಪ್ರವಾಸ ಆರಂಭಿಸಲಾಗುತ್ತದೆ.
-ನೆಕ್ಕಂಟಿ ಸೂರಿಬಾಬು ಅಧ್ಯಕ್ಷರು ವಿದ್ಯಾನಿಕೇತನ ವಿದ್ಯಾಸಂಸ್ಥೆ.

Advertisement

– ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next