Advertisement

ಮಾರ್ಗನ್ಸ್ ಗೇಟ್: ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

09:52 AM Mar 10, 2020 | keerthan |

ಮಂಗಳೂರು: ಇಲ್ಲಿನ ಮಾರ್ಗನ್ಸ್ ಗೇಟ್ ಎರಡನೇ ಬ್ರಿಡ್ಜ್ ನಡಿ ರೈಲ್ವೇ ಹಳಿಯಲ್ಲಿ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನೋರ್ವನ ಶವ ಭಾನುವಾರ ತಡರಾತ್ರಿ ಪತ್ತೆಯಾಗಿದೆ.

Advertisement

ಸುಮಾರು 30-35 ವರ್ಷ ಒಳಗಿನ ಯುವಕನ ಮೃತದೇಹ ಇದಾಗಿದ್ದು, ಸಮೀಪದಲ್ಲೇ ಬ್ಯಾಗ್ ಹಾಗೂ ಅದರೊಳಗೆ ಬಿಸ್ಲರಿ ಬಾಟಲ್ ನಲ್ಲಿ ಮದ್ಯ ಪತ್ತೆಯಾಗಿದೆ.

ಈತ ಧರಿಸಿದ್ದ ಪ್ಯಾಂಟಿನ ಕಿಸೆಯಲ್ಲಿ ತ್ರಿಶ್ಶೂರಿನ ಬ್ಯಾಂಕೊಂದರಲ್ಲಿ ಹಣ ಪಾವತಿಸಿದ ರಶೀದಿಯೊಂದು ಪತ್ತೆಯಾಗಿದೆ. ಪರ್ಸ್ ನಲ್ಲಿ ಚಿಲ್ಲರೆ ಹಣ ಬಿಟ್ಟರೆ ಮೊಬೈಲ್ ಕೂಡಾ ಇರಲಿಲ್ಲ. ಕೇರಳದಿಂದ ಬರುವ ರೈಲಿನಿಂದ ಯುವಕ ಬಿದ್ದು ಮೃತಪಟ್ಟಿರುವ ಸಾಧ್ಯತೆಗಳೂ ಇವೆ. ಅಥವಾ ರೈಲು ಹಳಿಯಲ್ಲಿ ನಡೆದುಕೊಂಡು ಬಂದು ಆತ್ಮಹತ್ಯೆ ನಡೆಸಿರುವ ಶಂಕೆಯೂ ಇದೆ.

ತಡರಾತ್ರಿಯ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next