ಇಸ್ಲಾಮಾಬಾದ್: ಜಗತ್ತಿನ ಮಿತ್ರ ರಾಷ್ಟ್ರಗಳಲೆಲ್ಲ ಸಾಲಕ್ಕಾಗಿ ಕೈ ಚಾಚುತ್ತಿರುವ ಪಾಕಿಸ್ತಾನಕ್ಕೆ ಈಗ ಪರಮಾಪ್ತ ರಾಷ್ಟ್ರ ಸೌದಿ ಅರೇಬಿಯಾ ಸಹ ಹೊಸ ಕಂಡೀಷನ್ ಹೇರಿದೆ. “ನಿಮಗೆ ಸಾಲ ಬೇಕೇ? ಹಾಗಿದ್ದರೆ ನಮ್ಮ ಷರತ್ತು ಪಾಲಿಸಿ’ ಎಂದು ಸೌದಿ ಅರೇಬಿಯಾಪಾಕಿಸ್ತಾನಕ್ಕೆ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
“ಮುಂದಿನ ದಿನಗಳಲ್ಲಿ ಷರತ್ತು ಸಹಿತವಾಗಿ ಮಾತ್ರ ಸಾಲ ನೀಡುತ್ತದೆ. ಸಾಲ ಪಡೆದ ರಾಷ್ಟ್ರಗಳು ಜವಾಬ್ದಾರಿಯುತವಾಗಿ ಅದನ್ನು ಬಳಸಬೇಕು, ಆರ್ಥಿಕ ಸುಧಾರಣೆ ಮಾಡಬೇಕು’ ಎಂದು ಸೌದಿ ವಿತ್ತ ಸಚಿವ ಮೊಹಮ್ಮದ್ ಅಲ್ ಜದಾನ್ ಹೇಳಿದ್ದಾರೆ.
ಈಗಾಗಲೇ ಹಣವಿಲ್ಲದೆ ಎಲ್ಲ ರಾಷ್ಟ್ರಗಳ ಬಳಿಯೂ ಸಾಲ ಕೇಳುತ್ತಿದೆ ಪಾಕಿಸ್ತಾನ. ಪಾಕಿಸ್ತಾನಕ್ಕೆ ಗರಿಷ್ಠ ಆರ್ಥಿಕ ನೆರವು ನೀಡುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯವೂ ಒಂದು. ಪಾಕ್‌ಗೆ ಅದು ಆಗಸ್ಟ್‌ನಲ್ಲಿ ಘೋಷಿಸಿದ್ದ 1 ಬಿಲಿಯನ್ ಡಾಲರ್ ನೆರವನ್ನು 5 ಬಿಲಿಯನ್ ಡಾಲರ್‌ಗೆàರಿಸುವ ಎಲ್ಲ ಸಾಧ್ಯತೆಯಿದೆ. ಅದಕ್ಕೆ ಪೂರಕವಾಗಿ ಹೊಸ ಷರತ್ತು ವಿಧಿಸಿರುವುದು ಪಾಕಿಸ್ತಾನಕ್ಕೆ ಸಂಕಷ್ಟ ತಂದೊಡ್ಡುವುದು ಖಚಿತವಾಗಿದೆ. ಇದುವರೆಗೆ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಷರತ್ತು ರಹಿತವಾಗಿ ಸಾಲ ಅಥವಾ ಅನುದಾನ ನೀಡುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಉಗ್ರ ಅಬ್ದುಲ್ ರಹಿಮಾನ್ ಮಕ್ಕಿ ವಿಚಾರದಲ್ಲಿ ಪರಮಾಪ್ತ ಮಿತ್ರ ಚೀನಾ ನೆರವು ನೀಡಿರಲಿಲ್ಲ ಎನ್ನುವುದು ಗಮನಾರ್ಹ.