Advertisement

ಭಾರತಕ್ಕಿಂತ ಶೇ. 50ರಷ್ಟು ಕಡಿಮೆಗೆ ರಫೇಲ್‌ ಖರೀದಿ?

12:30 AM Jan 17, 2019 | |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಉಂಟಾದ ವಿವಾದ ತೀವ್ರ ಸ್ವರೂಪ ಪಡೆದಿರುವಾಗಲೇ, ಫ್ರಾನ್ಸ್‌ ಸರಕಾರವು ರಫೇಲ್‌ ಯುದ್ಧ ವಿಮಾನಗಳ ಅಭಿವೃದ್ಧಿಗಾಗಿ 16,300 ಕೋಟಿ ರೂ. ನಿಗದಿಸಿದ್ದು ಭಾರಿ ಗೊಂದಲ ಉಂಟು ಮಾಡಿತ್ತು. ಇದನ್ನು ಹೊಸ ವಿಮಾನಗಳ ಖರೀದಿ ಮೊತ್ತ ಎಂದು ಭಾವಿಸಿದ ಕಾಂಗ್ರೆಸ್‌ ಸೇರಿದಂತೆ ಇತರ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದವು. ಆದರೆ ನಂತರ ಸ್ಪಷ್ಟನೆ ನೀಡಿದ, ಭಾರತಕ್ಕೆ ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡ್ರೆ ಝೀಗ್ಲರ್‌, ಇದು ಕೇವಲ ಹೊಸ್‌ ಎಫ್4 ಮಾದರಿಗಳ ಅಭಿವೃದ್ಧಿಗಾಗಿ ನಿಗದಿಸಲಾಗಿರುವ ಮೊತ್ತ. ಈ ಹಿಂದಿನ ಒಪ್ಪಂದದ ಪ್ರಕಾರ 28 ವಿಮಾನಗಳನ್ನು ಹೊಸ ಮಾದರಿಯಲ್ಲಿ 2024ರ ವೇಳೆಗೆ ರಫೇಲ್‌ ಕಂಪನಿ ಒದಗಿಸಲಿದೆ ಎಂದಿದ್ದಾರೆ. ಭಾರತವು 3ಆರ್‌ ಶ್ರೇಣಿಯ 36 ಯುದ್ಧ ವಿಮಾನಗಳನ್ನು 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಸುತ್ತಿದ್ದು, ಈ ವಿಮಾನಗಳು ಇದೇ ವರ್ಷದಿಂದ ಭಾರತಕ್ಕೆ ಆಗಮಿಸಲಿದೆ. ಇದೇ ವೇಳೆ ಪ್ಯಾರಿಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಇಮಾನ್ಯುವಲ್‌ ಮಾರ್ಕನ್‌ ನೇತೃತ್ವದ ಸರಕಾರ ಈ ವರದಿಯನ್ನು ತಿರಸ್ಕರಿಸಿದೆ. ಸರಕಾರ ಯಾವುದೇ ರೀತಿಯ ಖರೀದಿ ಆದೇಶವನ್ನು ಮಾಡಿಲ್ಲ ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next