Advertisement
ಪ್ರತಿ ವರ್ಷವೂ ಸಹಿತ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಹರಿಬಿಟ್ಟ ಸಂದರ್ಭದಲ್ಲಿ ಹಳೇ ಗೊಂಡಬಾಳ ಗ್ರಾಮದ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿನ ಸುಮಾರು 60 ರಿಂದ ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಳ್ಳುತ್ತವೆ. ಹಿರೇ ಹಳ್ಳ ಜಲಾಶಯದಿಂದ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹಳ್ಳಕ್ಕೆ ಹರಿಬಿಟ್ಟ ವೇಳೆ ಈ ಗ್ರಾಮದಲ್ಲಿ ಹಲವಾರು ಮನೆಗಳು ಜಲಾವೃತವಾಗುತ್ತವೆ.
Related Articles
Advertisement
ಬೆಳಗಿನ ಜಾವ 6 ರಿಂದ 18884 ಕ್ಯೂಸೆಕ್ ನೀರನ್ನು ಡ್ಯಾಮ್ ನ ಮೂರು ಕ್ರಸ್ಟ್ ಗೇಟ್ ಗಳ ಮೂಲಕ ಹಳ್ಳದ ಪಾತ್ರಕ್ಕೆ ಬಿಡಲಾಗಿದೆ. ಇದರಿಂದ ಹಳ್ಳವು ಭರ್ತಿಯಾಗಿ ಹರಿಯುತ್ತಿದೆ. ಹಳ್ಳದ ಪಾತ್ರ ವ್ಯಾಪ್ತಿಯಲ್ಲಿನ ಹಳೇಗೊಂಡಬಾಳ ಗ್ರಾಮದ ಸುಮಾರು 100 ಮನೆಗಳ ಜನರು ಆತಂಕಗೊಂಡಿದ್ದು, ಮನೆಯಲ್ಲಿ ದವಸ ಧಾನ್ಯಗಳು ನೀರಿನಲ್ಲಿ ನೆನೆದು ಹಾನಿಯಾಗಿವೆ. ಅಲ್ಲದೆ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವು ಸಹಿತ ನೀರಿನಲ್ಲಿ ಜಲಾವೃತಗೊಂಡಿದೆ. ಮಳೆರಾಯನ ಆರ್ಭಟದಿಂದ ರೈತರ ಬದುಕು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಬಂದಿದೆ