Advertisement

ಅಫ್ಘಾನ್‌ನಲ್ಲಿ ತಾಲಿಬಾನ್‌ ಅಟ್ಟಹಾಸ: 140 ಸೈನಿಕರ ಮಾರಣಹೋಮ 

09:33 AM Apr 22, 2017 | |

ಬಾಲ್ಖ್‌ : ಅಫ್ಘಾನಿಸ್ಥಾನದಲ್ಲಿ ಶುಕ್ರವಾರ ಸಂಜೆ ತಾಲಿಬಾನ್‌ ಅಟ್ಟಹಾಸಗೈದಿದ್ದು ಸೇನಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಮಸೀದಿಯ ಮೇಲೆ ಹೊಂಚು ದಾಳಿ ನಡೆಸಿ 140 ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈದಿದೆ. ಅಫ್ಘಾನ್‌ ಸೇನಾ ಪಡೆಗಳು,ಅಮೆರಿಕದ ನ್ಯಾಟೋ ಪಡೆಗಳು ಪ್ರತಿ ದಾಳಿ ನಡೆಸಿ 7 ಮಂದಿ ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ.

Advertisement

ಅಮೆರಿಕ ಸೇನಾ ವಕ್ತಾರರು ತಿಳಿಸಿದಂತೆ ಮಝರ್‌-ಇ-ಶರೀಫ್ ಪ್ರಾಂತ್ಯದಲ್ಲಿ ಸೇನಾ ನೆಲೆಯನ್ನು ಗುರಿಯಾಗಿರಿಸಿಕೊಂಡು 10 ಮಂದಿ ಉಗ್ರರು ದಾಳಿ ನಡೆಸಿ ನಮಾಜ್‌ ಮಾಡುತ್ತಿದ್ದ ಅಫ್ಘಾನ್‌ ಸೇನೆಯ 209 ನೇ ಬೆಟಾಲಿಯನ್‌ನ ಸೈನಿಕರನ್ನು ಹತ್ಯೆಗೈದಿದೆ. 

ದಾಳಿ ನಡೆದ ಬಳಿಕ ಸ್ಥಳದಲ್ಲಿ ಅಫ್ಘಾನ್‌ ಸೇನಾ ಪಡೆ,ನ್ಯಾಟೋ ಪಡೆಗಳು ಕಾರ್ಯಾಚರಣೆ ನಡೆಸಿ 7 ಉಗ್ರರನ್ನು ಹತ್ಯೆಗೈದಿವೆ. ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡರೆ,ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿವೆ. ಸ್ಥಳದಲ್ಲಿ ಭೀಕರ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ. 

11 ಮಂದಿ ಅಫ್ಘಾನ್‌ ಸೈನಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next