Advertisement

ನಾಗರಹೊಳೆ ಪಕ್ಷಿ ಸಮೀಕ್ಷೆಯಲ್ಲಿ 290 ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳ ಪತ್ತೆ

10:15 PM Feb 13, 2023 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವು 300 ಕ್ಕೂ ಹೆಚ್ಚು ಪ್ರಬೇಧಗಳಿಗೆ ಸೇರಿದ ಪಕ್ಷಿಗಳಿಗೆ ಆಶ್ರಯ ನೀಡಿರುವ ಹಸಿರು ಉದ್ಯಾನವಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ರಾಜ್ಯ ಜಂಗಲ್ ಇನ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದರು.

Advertisement

ನಾಗರಹೊಳೆ ಉದ್ಯಾನದಲ್ಲಿ ಕಳೆದ 3ದಿನದಿಂದ ನಡೆದಿದ್ದ ಪಕ್ಷಿ ಸಮೀಕ್ಷೆ ಅಭಿಯಾನ ಮುಕ್ತಾಯಗೊಂಡಿದ್ದು, ವೀರನಹೊಸಹಳ್ಳಿ ವಲಯದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಾಗರಹೊಳೆ ಅರಣ್ಯದಲ್ಲಿ ಪಕ್ಷಿ ಸಮೀಕ್ಷೆ ನಡೆಸಲು ದೇಶದ ೮ ರಾಜ್ಯಗಳಿಂದ ಪಕ್ಷಿ ಪ್ರಿಯರು ಆಗಮಿಸಿದ್ದು, ಇವರಲ್ಲಿ ಅನೇಕರಿಗೆ ಬೇರೆಲ್ಲೂ ಸಿಗದ ಅಪರೂಪದ ಪಕ್ಷಿಗಳು ಗೋಚರಿಸಿದ್ದು, ಉದ್ಯಾನವನ ಸರ್ವ ರೀತಿಯ ವನ್ಯಪ್ರಾಣಿ ಪಕ್ಷಿಗಳ ವಂಶಾಭಿವೃದ್ಧಿಗೆ ಪೂರಕವಾಗಿದೆ ಎಂದರು.

ಕೊಡುಗೆ
ನಾಗರಹೊಳೆ ಅಭಯಾರಣ್ಯದ ಅಭಿವೃದ್ಧಿಗೆ ಅರಣ್ಯದಂಚಿನ ಗ್ರಾಮಸ್ಥರ ಕೊಡುಗೆ ಅಪಾರವಾಗಿದ್ದು, ವನ್ಯಪ್ರಾಣಿಗಳ ಹಾವಳಿಗೆ ಬದುಕು ನಲುಗಿದ್ದರೂ ಅಭಯಾರಣ್ಯದ ಅಭಿವೃದ್ಧಿಗೆ ಪೂರಕ ಸಹಕಾರದಿಂದಾಗಿ ಇಂದು ನಾಗರಹೊಳೆ ಈ ಮಟ್ಟಕ್ಕೆ ಅಭಿವೃದ್ಧಿಯಾಗಿದೆ. ವನ್ಯಮೃಗಳ ದಾಳಿಗೆ ಬೆಳೆ ಮತ್ತು ಜೀವಹಾನಿ ಆದರೂ ಸ್ಥಳಿಯರು ಅರಣ್ಯ ಇಲಾಖೆಯೊಂದಿಗೆ ಸಕಾರಾತ್ಮಕ ಸ್ಪಂದನೆ ಇಲಾಖೆಗೆ ನೈತಿಕ ಸ್ಥೈರ್ಯ ಎನ್ನುವುದು ಗಮನಾರ್ಹ ಎಂದರು.

ಹಾರ್ನ್ ಬಿಲ್

ದಾಂಡೇಲಿ ಅರಣ್ಯದಲ್ಲಿ ಗೋಚರಿಸುವ ಹಾರ್ನ್ ಬಿಲ್ (ಕೊಂಬಿನ ಹಕ್ಕಿ) ಅಳಿವಿನಂಚಿನಲ್ಲಿದ್ದು, ಈ ಪಕ್ಷಿ ಸಂರಕ್ಷಣೆಗೆ ಇಲಾಖೆ ಆಧ್ಯತೆ ನೀಡಿದೆ. ಹುಲಿ ಸಂರಕ್ಷಣೆ ಕಾಯ್ದೆ ಅಡಿಯಲ್ಲೇ ಈ ಪಕ್ಷಿಯನ್ನು ಸೇರಿಸಿದ್ದು, ಅಕ್ರಮ ಭೇಟೆ ಮಾಡಿದಲ್ಲಿ ಉಗ್ರ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದರು.

ಹುಲಿ ಯೋಜನೆ ನಿರ್ದೇಶಕ ಮತ್ತು ಪಕ್ಷಿ ಸಮೀಕ್ಷೆ ಅಭಿಯಾನದ ರುವಾರಿ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ ಮೂರು ದಿನದ ಪಕ್ಷಿ ಸಮೀಕ್ಷೆ ಅಭಿಯಾನಕ್ಕೆ 700 ಸ್ವಯಂ ಸೇವಕರು ನೊಂದಣಿಯಾಗಿದ್ದು, ಈ ಪೈಕಿ 130 ಜನರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 118 ಸ್ವಯಂ ಸೇವಕರು ಭಾಗವಹಿಸಿದ್ದರು, ಸ್ವಯಂಸೇವಕರ ಮನವಿಯಂತೆ ಮುಂದಿನ ಸಮೀಕ್ಷೆಯಲ್ಲಿ ಪ್ರತಿಬೀಟ್‌ಗೆ ಇಬ್ಬರು ಸ್ವಯಂಸೇವಕರನ್ನು ನಿಯೋಜಿಸಲು ಪ್ರಯತ್ನಿಸಲಾಗುವುದೆಂದರು.

Advertisement

ಕಳೆದ ಬಾರಿ 260, ಈಬಾರಿ 290 ಪ್ರಬೇಧ ದಾಖಲು
೮೬೪ ಚದರ ಕಿ.ಮಿ. ವ್ಯಾಪ್ತಿಯ ನಾಗರಹೊಳೆಯನ್ನು 8 ವಲಯಗಳನ್ನಾಗಿ ವಿಭಾಗಿಸಿದ್ದು 91 ಬೀಟ್ ಗಳಲ್ಲಿ118 ಸ್ವಯಂ ಸೇವಕರ ತಂಡ ರಚಿಸಿ ಇಲಾಖೆ ಸಿಬಂದಿಯೊಂದಿಗೆ ಸಮೀಕ್ಷೆಗೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಈ ಸಮೀಕ್ಷೆಯಲ್ಲಿ 290 ಪ್ರಬೇಧಕ್ಕೆ ಸೇರಿದ ಪಕ್ಷಿಗಳು ಗುರುತಿಸಿ ಇ–ಬರ್ಡ್ಆಪ್ ನಲ್ಲಿ ದಾಖಲಿಸಲಾಗಿದೆ. ಕಳೆದ ಸಾಲಿನಲ್ಲಿ 260, ಪ್ರಬೇಧಕ್ಕೆ ಸೇರಿದ ಪಕ್ಷಿಗಳು ದಾಖಲಾಗಿದ್ದವು ಎಂದರು.

ಕಾರ್ಯಕ್ರಮದಲ್ಲಿ ಪಕ್ಷಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಸಿಎಫ್. ಎಸಿಎಫ್ ದಯಾನಂz, ನ್ಯಾಚುರಲಿಸ್ಟ್ ಗೋಪಿ, ಹಲವು ಸ್ವಯಂಸೇವಕರು ಅಭಿಪ್ರಾಯ ಹಂಚಿಕೊಂಡರು. ಎಲ್ಲ 8 ವಲಯಗಳ ಆರ್‌ಎಫ್‌ಓ ಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next