Advertisement

ಅನವಶ್ಯಕ ತಿರುಗಾಡುತ್ತಿದ್ದ 200ಕ್ಕೂ ಹೆಚ್ಚು ವಾಹನ ವಶ

02:42 PM Apr 08, 2020 | Suhan S |

ಹುಣಸೂರು: ನಗರ ಸೇರಿದಂತೆ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅನಾವಶ್ಯಕವಾಗಿ ತಿರುಗಾಡುತ್ತಿದ್ದ 200ಕ್ಕೂ ಹೆಚ್ಚು ಬೈಕ್‌, ಕಾರು, ಆಟೋಗಳನ್ನು ವಶಪಡಿಸಿಕೊಂಡರು.

Advertisement

ನಗರದಲ್ಲಿ ವಾರದ ಹಿಂದೆ ವಶಕ್ಕೆ ಪಡೆದಿದ್ದ ವಾಹನಗಳನ್ನು ಎಚ್ಚರಿಕೆ ನೀಡಿ, ವಾಪಾಸ್‌ ನೀಡಿದ್ದರ ಬೆನ್ನಲ್ಲೇ, ಲಾಕ್‌ಡೌನ್‌ ಇದ್ದರೂ ಪ್ರಮುಖ ರಸ್ತೆಗಳಲ್ಲಿ ಜಾಲಿ ರೈಡ್‌ ನಡೆಸುವುದು, ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುವುದು, ವ್ಯಾಟ್ಸಪ್‌ಗ್ಳಲ್ಲಿ ತಾವು ಹೋದಕಡೆಗಳ ಚಿತ್ರವನ್ನು ಹರಿ ಬಿಡುವುದನ್ನು ಪರಿಗಣಿಸಿದ ಪೊಲೀಸರು, ಎಸ್‌.ಪಿ.ರಿಶ್ಯಂತ್‌ರ ಆದೇಶದ ಮೇರೆಗೆ ಎಲ್ಲಂದರಲ್ಲಿ ಬೈಕ್‌ ಓಡಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿ, ಬೈಕ್‌ಗಳನ್ನು ವಶಕ್ಕೆ ಪಡೆದರು.

ಅನುಮತಿ ಇಲ್ಲದೆ ರಸ್ತೆಗಿಳಿಸಿದ್ದ ತಲಾ ಎರಡು ಆಟೋ ಹಾಗೂ ಕಾರನ್ನು ವಶಕ್ಕೆ ಪಡೆದರು. ಕಾರ್ಯಾಚರಣೆಗಿಳಿದ ತಹಶೀಲ್ದಾರ್‌ ಬಸವ ರಾಜ್‌, ವೃತ್ತ ನಿರೀಕ್ಷಕ ಪೂವಯ್ಯರ ತಂಡ ಹುಡುಗರಿಗೆ ಬಸ್ಕಿ ಹೊಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next