Advertisement

“ಮನ್‌ ಕಿ ಬಾತ್‌’ಆಲಿಸಿದ 100 ಕೋಟಿ ಮಂದಿ!

12:51 AM Apr 25, 2023 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ “ಮನ್‌ ಕಿ ಬಾತ್‌’ ಬಾನುಲಿ ಕಾರ್ಯಕ್ರಮವನ್ನು 100 ಕೋಟಿಗೂ ಅಧಿಕ ಮಂದಿ ಕನಿಷ್ಠ ಒಮ್ಮೆಯಾದರೂ ಆಲಿಸಿದ್ದಾರೆ. 23 ಕೋಟಿ ಜನರು ಕಾರ್ಯಕ್ರಮವನ್ನು ನಿಯಮಿತವಾಗಿ ಕೇಳಿದ್ದಾರೆ ಅಥವಾ ವೀಕ್ಷಿಸಿದ್ದಾರೆ ಎಂದು ಐಐಎಂ ರೋಹಕ್‌ ವರದಿ ತಿಳಿಸಿದೆ.

Advertisement

“ಕೇಳುಗರ ಪ್ರತಿಕ್ರಿಯೆ ಮತ್ತು ಭಾವನೆ, ಮನ್‌ ಕಿ ಬಾತ್‌ನ ವಿಶ್ಲೇಷಣೆ’-ಇದರ ಭಾಗವಾಗಿ ದೇಶದ ವಿವಿಧ ರಾಜ್ಯಗಳ ಮತ್ತು ವಿವಿಧ ವೃತ್ತಿಗಳ 10,003 ವ್ಯಕ್ತಿಗಳನ್ನು ಸಂದರ್ಶಿ ಸಲಾಗಿದೆ. ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಸ್ನೋಬಾಲ್‌ ಮಾದರಿಯನ್ನು ವಿಶ್ಲೇಷಣೆಗೆ ಬಳಸಲಾಗಿದೆ. ಒಂದು ವಲಯದಿಂದ ಸುಮಾರು 25,000 ಪ್ರತಿಕ್ರಿಯೆಗಳನ್ನು ಪಡೆಯ ಲಾಗಿದೆ. ಶೇ.96ರಷ್ಟು ಜನರಿಗೆ ಕಾರ್ಯಕ್ರಮದ ಕುರಿತು ಅರಿವಿದೆ. ಸುಮಾರು 23 ಕೋಟಿ ಮಂದಿ ನಿಯಮಿತವಾಗಿ ಕಾರ್ಯಕ್ರಮವನ್ನು ಆಲಿಸಿದ್ದಾರೆ. 41 ಕೋಟಿ ಮಂದಿ ಸಾಂದರ್ಭಿಕವಾಗಿ ವೀಕ್ಷಿಸುವುದರಿಂದ ನಿಯಮಿತ ವೀಕ್ಷಕರಾಗಿ ಬದಲಾಗುವ ಅಂಶವನ್ನು ಹೊಂದಿದ್ದಾರೆ. ಶೇ.65ರಷ್ಟು ಮಂದಿ ಹಿಂದಿಯಲ್ಲಿ ವೀಕ್ಷಿಸಿದ್ದು, ಶೇ.18ರಷ್ಟು ಮಂದಿ ಇಂಗ್ಲಿಷ್‌ನಲ್ಲಿ ಕಾರ್ಯ ಕ್ರಮವನ್ನು ವೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next