Advertisement

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

05:37 PM Aug 09, 2020 | Suhan S |

ಮುಂಬಯಿ, ಆ. 8: ಮುಂಬಯಿಯಲ್ಲಿ ಜುಲೈ ಕೊನೆಯ ವಾರದಿಂದ ಹೆಚ್ಚಿನ ಪ್ರಮಾಣದ ಆ್ಯಂಟಿಜೆನ್‌ ಪರೀಕ್ಷೆಯನ್ನು ನಡೆಸಲು ಪ್ರಾರಂಭಿಸಿದ್ದು, ನಗರದಲ್ಲಿ ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆ ಸರಾಸರಿ 7,500ಕ್ಕೆ ಏರಿಕೆಯಾಗಿದೆ. ಪರೀಕ್ಷೆಯ ಹೆಚ್ಚಳದ ಹೊರತಾಗಿಯೂ, ಹೊಸ ಪ್ರಕರಣಗಳು ಸತತವಾಗಿ 1,000 ಕ್ಕಿಂತಲೂ ಕಡಿಮೆಯಾಗಿದ್ದು, ಇದು ನಗರದ ಸಕಾರಾತ್ಮಕ ದರವನ್ನು ಜುಲೈನಲ್ಲಿ ಶೇ. 21.68ರಿಂದ ಶೇ. 20.83ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಿಎಂಸಿ ತನ್ನ ಜಂಬೋ ಆಂಟಿಜೆನ್‌ ಟೆಸ್ಟಿಂಗ್‌ ಡ್ರೈವ್‌ ಅನ್ನು ಜುಲೈ 25ರಂದು ಪ್ರಾರಂಭಿಸಿತು. ಇದರ ಅಡಿಯಲ್ಲಿ ಘನತ್ಯಾಜ್ಯ ಮತ್ತು ಪೊಲೀಸ್‌ ಇಲಾಖೆಗಳ ನೂರಾರು ಮುಂಚೂಣಿ ಕಾರ್ಮಿಕರನ್ನು ಪ್ರತಿದಿನ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆಗಸ್ಟ್‌ 4ರ ಹೊತ್ತಿಗೆ ಬಿಎಂಸಿ ಒಟ್ಟು 5,67,031 ಪರೀಕ್ಷೆ ನಡೆಸಿದೆ. ಕಳೆದ 12 ದಿನಗಳಲ್ಲಿ ಬಿಎಂಸಿ ಆ್ಯಂಟಿಜೆನ್‌ ಮತ್ತು ಆರ್‌ಟಿ-ಪಿಸಿಆರ್‌ ಪರೀಕ್ಷೆಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿದೆ. ಸತತ ಮೂರು ದಿನಗಳಲ್ಲಿ ನಾವು ಮುಂಬಯಿಯಲ್ಲಿ 10,000ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದ್ದೇವೆ. ನಾವು ಇನ್ನೂ ದೈನಂದಿನ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಎಂಸಿಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಹೇಳಿದರು.

ಬಿಎಂಸಿಯ ಅಂಕಿಅಂಶಗಳ ಪ್ರಕಾರ ಜುಲೈ 27ರಂದು 11,643 ಮಂದಿಯನ್ನು ಪರೀಕ್ಷಿಸಲಾಗಿದೆ. ಹೆಚ್ಚಿದ ಪರೀಕ್ಷೆಗಳ ಸಂಖ್ಯೆಯಿಂದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿಲ್ಲ. ನಗರದ ದೈನಂದಿನ ಕೋವಿಡ್‌ ಸಂಖ್ಯೆ 1,000ಕ್ಕಿಂತ ಕಡಿಮೆಯಾಗಿದೆ. ಜುಲೈ 27ರಂದು 938 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಮುಂಬಯಿಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವುದನ್ನು ತೊರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next