ಹೊಸದಿಲ್ಲಿ: ಪ್ಯಾಕೆಟ್‌ಗಳಲ್ಲಿ ಬರುವ ಕುರುಕಲು ತಿಂಡಿಗಳು, ಜಂಕ್‌ಫುಡ್‌ಗಳು ಆರೋಗ್ಯಕ್ಕೆ ಹಾನಿಕರ ಎಂಬುದು ಗೊತ್ತಿರುವುದೇ. ಆದರೆ ಇದೀಗ ಇದರಲ್ಲಿರುವ ಅಂಶಗಳು ಅತಿ ಅಪಾಯಕಾರಿ ಮಟ್ಟದಲ್ಲಿವೆ ಎಂದು ಸಂಶೋಧನೆಯೊಂದು ಹೇಳಿದೆ.
ಸೆಂಟರ್ ಫಾರ್ ಸಯನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ಹೆಸರಿನ ಚಿಂತಕರ ಚಾವಡಿಯೊಂದು ಲ್ಯಾಬೊರೇಟರಿ ಪರೀಕ್ಷೆಗಳನ್ನು ನಡೆಸಿದ್ದು, ಹಲವು ಜಂಕ್‌ಫುಡ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ನಿಗದಿಪಡಿಸಿರುವ ಮಟ್ಟಕ್ಕಿಂತ ಹೆಚ್ಚಿನ ಉಪ್ಪು ಮತ್ತು ಕೊಬ್ಬು ಇದೆ ಎಂದು ಹೇಳಿದೆ.
ಸಂಶೋಧನೆಯ ಪ್ರಕಾರ ಎಚ್‌ಯುಎಲ್ ಕಂಪೆನಿಯ ನೋರ್, ನೆಸ್ಲೆಯ ಮ್ಯಾಗಿ, ಟೂಯಮ್ ಚಿಪ್ಸ್, ಹಲ್ದೀರಾಮ್ಸ್‌ನ ಕ್ಲಾಸಿಕ್ ನಟ್ ಕ್ರ್ಯಾಕರ್, ಮೆಕ್‌ಡೊನಾಲ್ಡ್$Õ$° ಬರ್ಗರ್ ಕಿಂಗ್, ಡಾಮಿನೋಸ್, ಪಿಜಾØ ಹಟ್ ಮತ್ತು ಸಬ್‌ವೇನ ಉತ್ಪನ್ನಗಳಲ್ಲಿ ಅಂಶಗಳು ಹೆಚ್ಚಾಗಿವೆ ಎಂದಿದೆ.
ಸಿಎಸ್‌ಇನ ಎನ್ವಿರಾನ್‌ಮೆಂಟ್ ಮಾನಿಟರಿಂಗ್ ಲ್ಯಾಬೊರೇಟರಿ (ಇಎಮ್‌ಎಲ್)ನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಮೊದಲು ಅದು ವಿವಿಧ ಆಹಾರ ಉತ್ಪನ್ನಗಳಲ್ಲಿ ಹಾನಿಕಾರಕ ಅಂಶಗಳನ್ನು ಪತ್ತೆಮಾಡಿದ ಖ್ಯಾತಿ ಹೊಂದಿದೆ.
ಒಟ್ಟು 33 ಜಂಕ್‌ಫುಡ್‌ಗಳಲ್ಲಿರುವ ಕೊಬ್ಬು, ಉಪ್ಪು, ಕಾಬೋìಹೈಡ್ರೇಟ್‌ಗಳು ಹೆಚ್ಚಿರುವುದನ್ನು ಅದು ಗುರುತಿಸಿದೆ. ಇದರಲ್ಲಿ 19 ಮಾದರಿಗಳು ಚಿಪ್ಸ್, ನೂಡಲ್ಸ್ ಇತ್ಯಾದಿಗಳಾಗಿವೆ. 19 ಸ್ಯಾಂಪಲ್‌ಗಳು ಬರ್ಗರ್, ಪಿಜಾl ಇತ್ಯಾದಿಗಳಾಗಿವೆ. ಇದೇ ವೇಳೆ ವರದಿಯನ್ನು ಬಿಡುಗಡೆ ಮಾಡಿದ ಸಿಎಸ್‌ಇ, ಎಫ್ಎಸ್‌ಎಸ್‌ಐ ಆಹಾರ ವಸ್ತುಗಳ ಲೇಬಲ್‌ಗಳ ಕುರಿತ ಕಾನೂನು ಬಲಪಡಿಸಿಲ್ಲ. ಇದರಿಂದ ಆಹಾರದಲ್ಲೇನಿದೆ ಎಂದು ಗ್ರಾಹಕರಿಗೆ ತಿಳಿಯುತ್ತಿಲ್ಲ ಎಂದು ಹೇಳಿದೆ.