Advertisement

ಕೋವಿಡ್‌ ಕಾಲದಲ್ಲಿ ಪೈಜಾಮಕ್ಕೆ ಕುದುರಿತು ಬೇಡಿಕೆ

06:22 PM May 15, 2020 | sudhir |

ನ್ಯೂಯಾರ್ಕ್‌: ಕೋವಿಡ್‌ ವೈರಸ್‌ ಜನರ ಉಡುಪು ಖರೀದಿ ಟ್ರೆಂಡನ್ನು ಬದಲಾಯಿಸಿದೆ. ದೊಡ್ಡ ದೊಡ್ಡ ಅಂಗಡಿ ಮಳಿಗೆಗಳಲ್ಲಿ ಕೆಲವೇ ಮಂದಿ ಗ್ರಾಹಕರು ಕಂಡುಬರುತ್ತಿದ್ದಾರೆ.

Advertisement

ಅಡೋಬ್‌ ಅನಾಲಿಟಿಕ್ಸ್‌ ಅಧ್ಯಯನದ ಪ್ರಕಾರ, ಕಳೆದ ತಿಂಗಳು ಆನ್‌ಲೈನ್‌ ಮೂಲಕ ಖರೀದಿ ಹೆಚ್ಚಾಗಿದೆ. ಇದು ಅಂಗಡಿಗಳು ಖಾಲಿ ಎನಿಸಲು ಒಂದು ಕಾರಣವಾಗಿದೆ. ಆದಕ್ಕಿಂತ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಹೆಚ್ಚಿನವರು ಮನೆಯಿಂದ ಹೊರಬಂದು ಶಾಪಿಂಗ್‌ ಮಾಡಲು ಬಯಸುವುದಿಲ್ಲ. ಇದರಿಂದಾಗಿ ಎಪ್ರಿಲ್‌ನಲ್ಲಿ ಭಾರೀ ಪ್ರಮಾಣದ ಬೇಡಿಕೆಯನ್ನು ಆನ್‌ಲೈನ್‌ ಮಾರುಕಟ್ಟೆ ಕಂಡಿದೆ ಎಂದು ವರದಿ ಹೇಳಿದೆ.

ವರ್ಕ್‌ ಫ್ರಂ ಹೋಂ ಇದ್ದ ಕಾರಣ ಅಮೆರಿಕನ್ನರು ಮನೆಯಿಂದಲೇ ಶಾಪಿಂಗ್‌ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಹೆಚ್ಚು ದಿನಸಿ ಮತ್ತು ಪ್ಯಾಂಟ್‌ಗಳನ್ನು ಖರೀದಿ ಮಾಡಿದ್ದರು. ಗ್ರಾಹಕರ ಮನವೊಲಿಸಲು ಆನ್‌ಲೈನ್‌ ಮಾರುಕಟ್ಟೆಗಳು ಉಡುಪುಗಳ ಮೇಲಿನ ಬೆಲೆಗಳನ್ನು ಭಾರೀ ಕಡಿತಗೊಳಿಸಿದ್ದವು. ಇದು ಪರೋಕ್ಷವಾಗಿ ಜವುಳಿ ಅಂಗಡಿಗಳ ಮೇಲೆ ಪರಿಣಾಮ ಬೀರಿದ್ದು, ಮಾರ್ಚ್‌ ಮತ್ತು ಎಪ್ರಿಲ್‌ ನಡುವೆ ಜವುಳಿ ಅಂಗಡಿಗಳೂ ಸರಾಸರಿ ಶೇ. 12ರಷ್ಟು ಬೆಲೆಗಳನ್ನು ಕಡಿತಗೊಳಿಸಬೇಕಾಯಿತು. ಇದು ವಸ್ತ್ರ ಮಾರಾಟಕ್ಕೆ ವೇಗ ದೊರೆಯಲು ಸಹಾಯ ಮಾಡಿದೆ. ಈ ಅವಧಿಯಲ್ಲಿ ಶೇ. 34ರಷ್ಟು ಪ್ರಗತಿಯನ್ನು ದಾಖಲಿಸಲಾಗಿತ್ತು. ಮನೆಯಲ್ಲಿಯೇ ಇರಬೇಕಾದ ಕಾರಣ ಕೆಲವು ಅಮೆರಿಕನ್ನರು ಹೆಚ್ಚು ಬಟ್ಟೆಗಳನ್ನು ಕೊಂಡುಕೊಳ್ಳಲು ಮುಂದಾಗಿಲ್ಲ. ಕಚೇರಿ, ಜಿಮ್‌ ಅಥವಾ ಇತರ ಪ್ರವಾಸಗಳಿಗೆ ಧರಿಸಲು ಬಟ್ಟೆಗಳನ್ನು ಖರೀದಿಸುವ ಅಗತ್ಯವಿಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next