ವರ್ಷಕ್ಕೆ ಒಂದೆರಡು ಚಿತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ನಟಿ ನಿಶ್ವಿಕಾ ನಾಯ್ಡು ಅವರಿಗೆ 2022 ವಿಶೇಷ ಅನ್ನಬಹುದು. “ಗಾಳಿಪಟ -2′ ಮೂಲಕ ಈ ವರ್ಷ ತೆರೆಗೆ ಬಂದ ಚೆಲುವೆ ಬ್ಯಾಕ್ ಟು ಬ್ಯಾಕ್ 3 ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸರಿಸುಮಾರು ಒಂದು ವರ್ಷಗಳ ಕಾಲ ಚಿತ್ರೀಕರಣ ನಡೆಸಿ ತೆರೆಗೆ ಬಂದತಹ ಗುರು ಶಿಷ್ಯರು ಚಿತ್ರದ ಮೂಲಕ ಮತ್ತೂಮ್ಮೆ ತೆರೆ ಮೇಲೆ ಬಂದಿದ್ದಾರೆ. ಈ ಚಿತ್ರದಲ್ಲಿ ನಿಶ್ವಿಕಾ ಅವರಿಗೆ ಭಿನ್ನವಾದ ಪಾತ್ರ ನಿಭಾಯಿಸಲು ಒಂದು ಒಳ್ಳೆ ಅವಕಾಶ ಸಿಕ್ಕಿತ್ತು, ಈ ಹಿಂದೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರದ ನಿಶ್ವಿಕಾ ಈ ಚಿತ್ರದಲ್ಲಿ ಸೂಜಿ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಭಿನ್ನ ಗೆಟಪ್‌ಗ್ಳಲ್ಲಿ ಕಾಣಿಸಿಕೊಳ್ಳುವ ನಿಶ್ವಿಕಾ, ಚಿತ್ರರಂಗದಲ್ಲಿ ಈವರೆಗೆ ಮಾಡಿರುವ ಸಿನಿಮಾಗಳಲ್ಲಿ ಸೀರೆಯುಟ್ಟು, ಚೂಡಿದಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಕ್ಕದ ಮನೆ ಹುಡುಗಿ ಅನ್ನುವಂತ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕುರಿತು ಮಾತನಾಡುವ ನಿಶ್ವಿಕಾ, “ನನ್ನ ಮೊದಲ ಚಿತ್ರದಿಂದ ಇಲ್ಲಿವರೆಗೂ ನಾನು ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ಹಿಂದೆ ಬಂದ ಸಖತ್ ಚಿತ್ರದಲ್ಲಿ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡೆ. ಜಂಟಲ್ ಮೆನ್ ಚಿತ್ರದಲ್ಲಿ ಸೀರೆಯುಟ್ಟು ಡೈಟೀಷನ್ ಆದೆ. ಅಮ್ಮಾ ಐ ಲವ್‌ಯೂ ದಲ್ಲಿ ಸಿಂಪಲ್ ಹುಡುಗಿಯಾಗಿದ್ದೆ, ಹೀಗೆ ಸಿಂಪಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದಕ್ಕಿಂತ ಒಂದು ಪಾತ್ರ ಭಿನ್ನವಾಗಿಯೇ ಇದೆ. ಈ ಪಾತ್ರಗಳು ನನಗೆ ಸಾಕಷ್ಟು ಹೆಸರನ್ನು ನೀಡಿದೆ’ ಎನ್ನುತ್ತಾರೆ.
ಇದನ್ನೂ ಓದಿ:ರಗಡ್ ಲುಕ್‌ನಲ್ಲಿ ಶಿವಣ್ಣ: ‘ವೇದ’ ಹೊಸ ಪೋಸ್ಟರ್ ಗೆ ಫ್ಯಾನ್ಸ್ ಫಿದಾ
ಚಿತ್ರರಂಗದಲ್ಲಿ ಗ್ಲಾಮರ್ ಮತ್ತು ಡಿ -ಗ್ಲಾಮರ್ ಪಾತ್ರಗಳ ನಡುವೆ ಇರುವ ಗೆರೆ ನಟಿಯರ ಮೇಲೆ ಪ್ರಭಾವ ಬೀರವುದಿಲ್ಲ. ಆ ಒಂದು ಅಂಶ ಇಂದಿಗೆ ಅಪ್ರಸ್ತುತ ಅನ್ನುವ ನಿಶ್ವಿಕಾ, “ಇಂದಿನ ನಟಿಯರ ಮಟ್ಟಿಗೆ ಗ್ಲಾಮರ್, ಡಿ-ಗ್ಲಾಮರ್ ಅನ್ನುವ ಮಾತು ಅಷ್ಟು ಸಮಂಜಸವಲ್ಲ. ಇಂದಿಗೆ ಚಿತ್ರದ ಕಥೆ, ಪಾತ್ರ , ನಟಿಗೆ ನಟನೆಯಲ್ಲಿ ಎಷ್ಟು ಸ್ಕೋಪ್ ಇದೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಗ್ಲಾಮರ್ ಪಾತ್ರದಲ್ಲಿ ನಟಿ ಮಿಂಚುತ್ತಾಳೆ, ಡಿ -ಗ್ಲಾಮರ್‌ನಲ್ಲಿ ಕಾಣಿಕೊಳ್ಳುವುದು ದೊಡ್ಡ ಮಾತು ಅನ್ನುವ ಕಾಲ ಹೋಗಿದೆ ಎಂದು ಭಾವಿಸುತ್ತೇನೆ. ನನ್ನ ಮುಂದಿನ ಚಿತ್ರ “ದಿಲ್ ಪಸಂದ್’ನಲ್ಲಿ ಮೊದಲ ಬಾರಿಗೆ ಗ್ಲಾಮರಸ್ ಆಗಿ ತೆರೆ ಮೇಲೆ ಬರಲಿದ್ದೇನೆ. ಇದು ನನ್ನ ಸಿನಿ ಜರ್ನಿಯಲ್ಲೇ ಮೊದಲ ಬಾರಿಯ ಗ್ಲಾಮರ್ ಪಾತ್ರ. ಬೋಲ್ಡ್ ಕ್ಯಾರೆಕ್ಟರ್ . ಹಳ್ಳಿ ಹುಡುಗಿ ಪಾತ್ರದಿಂದ ಸಡನ್ ಆಗಿ ಫುಲ್ ಗ್ಲಾಮರ್ ಅಲ್ಲಿ
ಕಾಣಿಸಿಕೊಳ್ಳುತ್ತೇನೆ. ಪ್ರೇಕ್ಷಕರಿಗೆ ನನ್ನ ಪಾತ್ರಗಳು ಪ್ರತಿಯೊಂದು ಚಿತ್ರದಲ್ಲೂ ಭಿನ್ನವಾಗಿಯೇ ಕಾಣಿಸುತ್ತದೆ. ಪಾತ್ರ ಗ್ಲಾಮರ್ ಇರಲಿ ಡಿಗ್ಲಾಮರ್ ಇರಲಿ ನಟನೆಗೆ ಒಳ್ಳೆಯ ಅವಕಾಶವಿರಬೇಕು’ ಎಂಬುದು ನಿಶ್ವಿಕಾ ಭಾವನೆ.