Advertisement

ಹೊಸಪೇಟೆ : ಮಳೆಯ ನಡುವೆ ಹಂಪಿಗೆ ಹರಿದು ಬಂದ ಜನಸಾಗರ

08:08 PM Jul 10, 2022 | Team Udayavani |

ಹೊಸಪೇಟೆ : ಮಳೆಯ ನಡುವೆಯೂ ವಿಕೇಂಡ್‌ನಲ್ಲಿ ಹಂಪಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಸ್ಮಾರಕ ವೀಕ್ಷಣೆ ಮಾಡಿದರು.

Advertisement

ಆಷಾಢ ಮಾಸ, ವಿಕೇಂಡ್ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಯ ಕಡೆ ಮುಖಮಾಡಿದ ಪ್ರವಾಸಿಗರು, ಮೊದಲು ವಿರೂಪಾಕ್ಷೇಶ್ವರ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿ ದರ್ಶನ ಪಡೆದರು.

ಬಳಿಕ ಪರಿವಾರ ಸಮೇತ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆª ಮಾಡಿ ಕಣ್ತುಂಬಿಕೊಂಡರು.

ಹೇಮಕೂಟ, ಎದುರು ಬಸವಣ್ಣ ಮಂಟಪ, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಾಲಯ, ಉಗ್ರ ನರಸಿಂಹ, ಬಡವಿಲಿಂಗ, ಭೂಮಿಮಟ್ಟದ ಶಿವಾಲಯ, ಹಾಜರರಾಮ ದೇಗುಲ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ಕಮಲ ಮಹಲ್, ಗಜಶಾಲೆ, ವಿಜಯವಿಠಲ ದೇವಾಲಯ ಆವರಣದಲ್ಲಿ ಪ್ರವಾಸಿಗರು ಕಂಡು ಬಂದರು.

ಟಿ.ಬಿ.ಡ್ಯಾಂಗೆ ಜನಸಾಗರ:
ನೀರಿನ ಸಂಗ್ರಹ ಹೆಚ್ಚಾಗಿ ತುಂಗಭದ್ರಾ ಜಲಾಶಯ ಮೈದುಂಬಿಕೊಳ್ಳುತ್ತಿದ್ದಂತೆ ಟಿ.ಬಿ.ಡ್ಯಾಂ ವೀಕ್ಷಣೆ ಮಾಡಲು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಜಲಾಶಯ ವೀಕ್ಷಣೆ ಮಾಡಿದ ಬಳಿಕ, ಕೆಳಭಾಗದ ಉದ್ಯಾನವನದಲ್ಲಿ ಸಂಗೀತ ಕಾರಂಜಿ ವೀಕ್ಷಿಸಿ ಕಣ್ತುಂಬಿಕೊಂಡರು. ಜಲಾಶಯದ ಹಿನ್ನೀರಿನ ಗುಂಡಾ ಪ್ರದೇಶದಲ್ಲಿ ನೀರಿನ ಬೋರ್ಗೆರತ ಕಂಡು ಪುಳೀಕಿತರಾದರು.

Advertisement

ಒಟ್ಟಾರೆ ಹಂಪೆಯಲ್ಲಿ ಪ್ರವಾಸಿಗರಿಂದ ಆರ್ಥಿಕ ಚಟುವಟಿಕೆಗಳು ವೇಗವನ್ನು ಪಡೆದವು. ಪೊಲೀಸ್ ಮತ್ತು ಗೃಹರಕ್ಷಕದಳದವರು ಸಾರ್ವಜನಿಕರು ತುಂಗಭದ್ರ ನದಿಯ ಒಳಗಡೆ ಹೋಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ಇದನ್ನೂ ಓದಿ : ಉತ್ತರಾಖಂಡ: ಆಗಸದಲ್ಲೇ ನಿಂತ ಕೇಬಲ್‌ ಕಾರು: ಶಾಸಕರೂ ಲಾಕ್‌

ಶನಿವಾರ ಮತ್ತು ಭಾನುವಾರ ಇದ್ದ ಕಾರಣ ತುಂಬಿ ಹರಿಯುತ್ತಿರುವ ತುಂಗಭದ್ರ ಜಲಾಶಯದಲ್ಲಿನ ನೀರಿನ ರುದ್ರರಮಣೀಯ ನರ್ತನೆ ಕಣ್ತುಂಬಿಕೊಳ್ಳಲು ಪ್ರಕೃತಿ ಪ್ರವಾಸಿಗರು ಲಘು ಪ್ರವಾಸ ಕೈಗೊಂಡು, ಹಂಪೆ ಮತ್ತು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವ ಮೂಲಕ ಖಷಿಯ ಅನುಭೂತಿ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next