Advertisement

ನೀರಿನಲ್ಲಿ ಅಧಿಕ ಪ್ರಮಾಣದ ನೈಟ್ರೇಟ್ ಪತ್ತೆ : ಕೈಗಾರಿಕೆ ತ್ಯಾಜ್ಯದಿಂದ ಉಸಿರುಗಟ್ಟುವ ಸ್ಥಿತಿ

07:09 PM Apr 27, 2022 | Team Udayavani |

ಹುಮನಾಬಾದ: ಪಟ್ಟಣ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶದ ಕೆಲ ಕೆಮಿಕಲ್ ಕಾರ್ಖಾನೆಗಳು ವಿಷ ಪೂರಿತ ತ್ಯಾಜ್ಯ ನೇರವಾಗಿ ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಮಾಣಿಕನಗರ, ಗಡವಂತಿ ಗ್ರಾಮಗಳಲ್ಲಿನ ಅಂತರ್ಜಲ ದಿನದಿಂದ ದಿನಕ್ಕೆ ಹಾಳಾಗುತ್ತಿದೆ.

Advertisement

ತಾಲೂಕಿನ ಗಡವಂತಿ, ಮಾಣಿಕನಗರ, ಮೊಳಕೇರಾ ಗ್ರಾಮದಲ್ಲಿನ ಕೆಲ ತೆರೆದ ಭಾವಿ ಹಾಗೂ ಕೊಳವೆ ಭಾವಿಗಳ ನೀರಿನ ಪರೀಕ್ಷೆ ನಡೆದಿದ್ದು, ನೀರಿನಲ್ಲಿ ಅಧಿಕ ಪ್ರಮಾಣದ ನೈಟ್ರೇಟ್ ಅಂಶ ಇರುವ ಬಗ್ಗೆ ನೀರು ಪರೀಕ್ಷೆ ವರದಿಯಿಂದ ಬಳಕಿಗೆ ಬಂದಿದೆ.

ಕಳೆದ ಒಂದು ದಶಕದಿಂದ ಇಲ್ಲಿನ ಕೆಮಿಕಲ್ ಕಾರ್ಖಾನೆಗಳ ತ್ಯಾಜ್ಯದಿಂದ ಪರಿಸರ ಹಾಗೂ ಅಂತರ್ಜಲ ಹಾಳಾಗುತ್ತಿರುವ ಕುರಿತು ಇಲ್ಲಿನ ಗ್ರಾಮಸ್ಥರು ಅನೇಕ ಪ್ರತಿಭಟನೆಗಳು ನಡೆಸಿದರು. ಹೆದ್ದಾರಿ ತಡೆ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಎದುರಿಗೂ ಕೂಡ ಪ್ರತಿಭಟನೆ ನಡೆಸಿ ಕಲ್ಮಶಗೊಳ್ಳುತ್ತಿರುವ ವಾತಾವರಣವನ್ನು ತಡೆಯಿರಿ ಹಾಗೂ ನಮಗೂ ಬದುಕಲು ಬಿಡಿ ಎಂದು ಒತ್ತಾಯಿಸಿದ ಪ್ರಸಂಗಗಳು ಘಟಿಸಿದರು ಕೂಡ ಇಲ್ಲಿನ ಅಧಿಕಾರಿಗಳು, ರಾಜಕಾರಣಿಗಳು ಮಾತ್ರ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾತ್ರ ಇಂದಿಗೂ ಮಾಡಿಲ್ಲ.

ಇದನ್ನೂ ಓದಿ : ಸೈಕಲ್ ಮೂಲಕ ಭಾರತ ಯಾತ್ರೆ ಹೊರಟ ತಮಿಳುನಾಡಿನ ಯುವಕ

ತಹಶೀಲ್ದಾರ ವಿಫಲ: ಕಳೆದ ಕೆಲ ದಿನಗಳ ಹಿಂದೆ ಕೆಮಿಲ್ ತ್ಯಾಜ್ಯ ನೇರವಾಗಿ ಹೊರ ಬಿಡುತ್ತಿರುವ ಖಚಿತ ಮಾಹಿತಿ ಮೇರೆಗೆ ಇಲ್ಲಿನ ತಹಶೀಲ್ದಾರ ಡಾ| ಪ್ರದೀಪಕುಮಾರ ಹಿರೇಮಠ ಮಧ್ಯರಾತ್ರಿ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರೇಡಿಸನ್ ಲ್ಯಾಬ್ ಹಾಗೂ ಕರ್ನಾಟಕ ಪೇಪರ್ ಮೀಲ್ ಎರೆಡು ಕಾರ್ಖಾನೆಗಳ ತ್ಯಾಜ್ಯ ಹೊರಬರುತ್ತಿತ್ತು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ನಂತರ ನೋಟಿಸ್ ನೀಡಲಾಗಿದೆ ಎಂದು ಕೂಡ ಹೇಳಿದರು. ಆದರೂ, ಕೂಡ ಇಂದಿಗೂ ಕಾರ್ಖಾನೆಗಳ ತ್ಯಾಜ್ಯ ಹೊರಬಿಡುವ ಕೆಲಸ ಮಾತ್ರ ನಿಂತಿಲ್ಲ. ಅನೇಕ ಬಾರಿ ಕೈಗಾರಿಕೆಗಳಿಗೆ ತಹಶೀಲ್ದಾರ ಖುದ್ದು ಭೇಟಿ ನೀಡಿದ ಹಿನ್ನೆಲೆಯಲ್ಲಿ ಅನೇಕ ಆರೋಪಗಳು ಕೂಡ ಅವರ ವಿರುದ್ಧ ಕೇಳಿ ಬರುತ್ತಿವೆ.

Advertisement

ಯಾವ ಕಾಯ್ದೆ ಹಾಗೂ ಕಾನೂನು ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಕಾನೂನು ಉಲ್ಲಂಘಟನೆ ಕಂಡ ಮೇಲೆ ಕಾರ್ಖಾನೆಗಳ ವಿರುದ್ಧ ಯಾವ ಕ್ರಮಕ್ಕೆ ಶೀಫಾರಸು ಮಾಡಲಾಗಿದೆ ಎಂಬ ಕುರಿತು ಮಾಧ್ಯಮಗಳ ಪ್ರಶ್ನೆಗೆ ಇಂದಿಗೂ ಕೂಡ ತಹಶೀಲ್ದಾರರು ಮಾತ್ರ ಉತ್ತರಿಸಲು ಮುಂದಾಗಿಲ್ಲ. ಅಧಿಕಾರಿಗಳ ನಡೆ ವಿರುದ್ಧ ಗಡವಂತಿ, ಮಾಣಿಕನಗರ ಗ್ರಾಮಸ್ಥರು ಮಾತ್ರ ಪ್ರತಿನಿತ್ಯ ಹಿಡಿಶಾಪ ಹಾಕುವುದು ಮರೆಯುತ್ತಿಲ್ಲ.

ಗಡವಂತಿ ಹಾಗೂ ಮಾಣಿಕನಗದಲ್ಲಿ ನೀರಿ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ನೀಡಿನಲ್ಲಿ ಅಧಿಕ ಪ್ರಮಾಣದ ನೈಟ್ರೇಟ್ ಇರುವುದು ಪತ್ತೆಯಾಗಿದೆ. ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಕಂಡುಬರುವ ರಾಸಾಯನಿಕಗಳೆಂದರೆ ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್, ಕಬ್ಬಿಣಾಂಶ, ಪಿ.ಹೆಚ್, ಕ್ಲೋರೈಡ್ ನಿಗದಿತ ಪ್ರಮಾಣದಲ್ಲಿ ಇರಬೇಕು. ಹೆಚ್ಚಿನ ಪ್ರಮಾಣದಲ್ಲಿ ಯಾವುದೆ ರಾಸಾಯನಿಕಗಳು ಕಂಡು ಬಂದರೆ ಅದು ಕುಡಿಯಲು ಯೋಗ್ಯವಾಗುವುದಿಲ್ಲ ಎಂದು ಜಲ ಪರೀಕ್ಷಾ ಪ್ರಯೋಗಾಲಯದ ತಜ್ಞರು ತಿಳಿಸಿದ್ದಾರೆ.
– ವಿವೇಕಾನಂದ ಸಾಟೆ, ನೀರು ಪ್ರಯೋಗಲಾಯದ ತಜ್ಞ.

ಬೃಹತ್ ಕೈಗಾರಿಕೆಗಳಿಂದ ಗಡವಂತಿ ಮಾಣಿಕನಗರ ಸೇರಿದಂತೆ ಸುತ್ತಲ್ಲಿನ ಪ್ರದೇಶದಲ್ಲಿನ ವಾತಾವರಣ ಹಾಳಾಗುತ್ತಿರುವ ಕುರಿತು ಮಾಹಿತಿ ಇದ್ದು, ಈ ಕುರಿತು ಕೂಡಲೇ ಬೀದರನಲ್ಲಿ ಕೈಗಾರಿಕೆಗಳ ತ್ಯಾಜ್ಯ ಸಂಸ್ಕರಿಸುವ ಯಂತ್ರ ಅಳವಡಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಶೇ.90ರಷ್ಟು ಕೆಲಸ ಪೂರ್ಣಗೊಳ್ಳಲಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಕೆಲ ದಿನಗಳಲ್ಲಿ ಕಾರ್ಖಾನೆಗಳ ಜೊತೆಗೆ ಘಟಕದ ಮುಖ್ಯಸ್ಥರು ಕರಾರುಮಾಡಿಕೊಂಡು ಕಾರ್ಖಾನೆಗಳ ತ್ಯಾಜ್ಯವನ್ನು ನೇರವಾಗಿ ಸಂಸ್ಕರಣ ಘಟಕಕ್ಕೆ ರವಾನಿಸು ಕೆಲಸ ಆಗಲಿದ್ದು, ಇಲ್ಲಿನ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
– ಗೋವಿಂದ್ ರೆಡ್ಡಿ, ಜಿಲ್ಲಾಧಿಕಾರಿ ಬೀದರ

– ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next