Advertisement
ಬಿ.ಸಿ.ರೋಡಿನಲ್ಲಿ ಶುಕ್ರವಾರ ವಸತಿ ಯೋಜನೆಯಡಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಗೆ ಮಂಜೂರಾದ 2,060 ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ, 94ಸಿ-94ಸಿಸಿ ಹಕ್ಕು ಪತ್ರ, ಪರಿಹಾರ ಧನದ ಚೆಕ್ ವಿತರಣೆ, ಅಂಗವಿಕಲರಿಗೆ ಸಾಧನಾ ಸಲಕರಣೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಯುಸಿ, ಪದವಿ ಕಲಿತು ಉದ್ಯೋಗವಿಲ್ಲದೆ ಮನೆಯಲ್ಲಿರುವ ಯುವಕರಿಗೆ ಅಗ್ನಿಪಥಕ್ಕೆ ತರಬೇತಿ ಪಡೆಯಲು ಅವಕಾಶವಿದ್ದು, ಕರಾ ವಳಿಯ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಇಲಾಖೆಯ ಮೂಲಕ ರಾಜ್ಯ ಸರಕಾರವು ಕರಾವಳಿ ಜಿಲ್ಲೆಗಳಲ್ಲಿ ಮೂರು ತರಬೇತಿ ಶಾಲೆಗಳನ್ನು ಆರಂಭಿಸಲಿದೆ. ಅಗ್ನಿಪಥದಲ್ಲಿ 4 ವರ್ಷ ಸೇವೆ ಪೂರೈಸಿದವರಲ್ಲಿ ಅವರು ಬಯಸಿದರೆ 25 ಶೇ.ದಷ್ಟು ಮಂದಿಗೆ ಸೇನೆಯಲ್ಲಿ ಮುಂದುವರಿಯಲು ಕೂಡ ಅವಕಾಶವಿರುತ್ತದೆ ಎಂದರು. ರಾಜ್ಯದಲ್ಲಿ ಬೊಮ್ಮಾಯಿ ಸರಕಾರವು ಬಡವರ ಕಲ್ಯಾಣದಲ್ಲಿ ತೊಡ ಗಿದ್ದು, ಈಗಾಗಲೇ ಪರಿಶಿಷ್ಟರಿಗೆ 75 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದು, 6 ತಿಂಗಳಲ್ಲಿ ರೈತರಿಗೆ ಕುಮ್ಕಿ ಹಕ್ಕನ್ನೂ ಕೊಡಲು ಸರಕಾರ ಬದ್ಧವಾಗಿದೆ ಎಂದರು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.