Advertisement

ಗ್ರಾಮೀಣ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಒತ್ತು

07:33 PM Aug 29, 2020 | Suhan S |

ಕಲಬುರಗಿ: ಶಿಕ್ಷಣವೇ ಅಭಿವೃದ್ಧಿಗೆ ಪೂರಕವಾಗಿದ್ದರಿಂದ ಅದರ ಅಭಿವೃದ್ಧಿಗೆ ಬದ್ಧವಾಗಿದ್ದು, ಗ್ರಾಮೀಣ ಭಾಗದ ಶಿಕ್ಷಣ ಅಭಿವೃದ್ಧಿಗಾಗಿ ಮತ್ತಷ್ಟು ಕಾರ್ಯ ರೂಪಿಸುತ್ತೇನೆ ಎಂದು ಅಫ‌ಜಲಪುರ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ ಹೇಳಿದರು.

Advertisement

ತಾಲೂಕಿನ ಫರಹತಾಬಾದ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು 2020-21ನೇ ಸಾಲಿನ ಪ್ರವೇಶ ಪ್ರಾರಂಭ ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಫ‌ಜಲಪುರ ವಿಧಾನಸಭೆ ಮತಕ್ಷೇತ್ರದಲ್ಲಿ ಬರುವ ಎಲ್ಲ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಸಮಸ್ಯೆ ಬಗೆಹರಿಸಲು ಹಾಗೂ ಬಡವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಸಲುವಾಗಿ ವಿಶ್ರಮಿಸದೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿಗಾಗಿ ಈಗಾಗಲೇ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಕೋಣೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ತರುವ ಮುಖಾಂತರ ಮಾದರಿ ಕಾಲೇಜು ಮಾಡುತ್ತೇನೆ ಎಂದರು.

ಜಿ.ಪಂ ಸಾಮಾಜಿಕ ನ್ಯಾಸ್ಥಾಯಿ ಸಮಿತಿ ಅಧ್ಯಕ್ಷರಾದ ದಿಲೀಪ್‌ ಆರ್‌ .ಪಾಟೀಲ ಮಾತನಾಡಿ, ಕಾಲೇಜು ಅಭಿವೃದ್ಧಿಗೆ ತಮ್ಮ ಅನುದಾನದಡಿ 5 ಲಕ್ಷ ರೂ. ತರಲಾಗಿದೆ. ಇನ್ನುಳಿದ ಸಮಸ್ಯೆಗಳನ್ನು ಪರಿಹರಿಸಲು ಶಾಸಕರ ಜೊತೆಗೆ ಕೈಜೋಡಿಸಿ ಸಹಾಯ ಮಾಡುವೆ ಎಂದು ಭರವಸೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಬಿರಾದಾರ ಮಾತನಾಡಿ, ಈಗಾಗಲೇ ಮುಚ್ಚಿ ಹೋಗಿದ್ದ ಕಾಲೇಜನ್ನು ಶಾಸಕರು ಮರು ಮರು ಮಂಜೂರಾತಿ ಮಾಡಿಸಿಕೊಂಡು ಬಂದಿದ್ದಾರೆ ಎಂದರು. ಫರಹತಾ ಬಾದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ತಿಬಶೆಟ್ಟಿ, ಡಾ| ಶರಣಪ್ಪ ಮಾಳಗಿ, ಮುಖಂಡರಾದ ಶಿವಕುಮಾರ ಶರ್ಮಾ, ಬಸವರಾಜ ದೊಡ್ಡಮನಿ, ಮಲ್ಲಿಕಾರ್ಜುನ ಖನ್ನಾ, ಡಾ| ಶರಣಗೌಡ ಪಾಟೀಲ, ಶರಣು ಶಹಾಬಾದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next