Advertisement

ಯೋಜನೆಯಲ್ಲಿ ಇನ್ನಷ್ಟು ನಗರಗಳ ಜೋಡಣೆ

12:26 AM Jul 08, 2019 | Sriram |

ಕಾಸರಗೋಡು: ಕಾಸರ ಗೋಡು- ಕೋವಳಂ ತನಕದ ಜಲಸಾರಿಗೆ ಯೋಜನೆಯಲ್ಲಿ ಇನ್ನಷ್ಟು ನಗರಗಳನ್ನು ಜೋಡಿಸಲು ಕೇರಳ ವಾಟರ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಕ್ವಿಲ್)ನ ನಿರ್ದೇಶಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ.

Advertisement

ಈ ಯೋಜನೆಯ ಪ್ರಥಮ ಹಂತದ ನವೀಕರಣ ಕೆಲಸಗಳನ್ನು 2020ರಲ್ಲಿ ಪೂರ್ತಿಕರಿಸಲಾಗುವುದು. ಸಕಾಲದಲ್ಲಿ ಈ ಯೋಜನೆ ಜಾರಿ ಗೊಳಿಸಲು ಸಂಬಂಧಪಟ್ಟ ಎಲ್ಲ ಇಲಾಖೆ ಗಳನ್ನೊಳಗೊಂಡ ವಿಶೇಷ ಸಮಿತಿಗೆ ರೂಪು ನೀಡಿ ನಿರ್ಮಾಣ ಕೆಲಸಗಳಿಗೆ ತ್ವರಿತ ಚಾಲನೆ ನೀಡುವಂತೆ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನಿರ್ದೇಶ ನೀಡಿದ್ದಾರೆ. ಸರಕಾರ ಮತ್ತು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಂಪೆನಿ ಜಂಟಿಯಾಗಿ ರೂಪು ನೀಡಿದ ಸಂಘವಾಗಿದೆ ಕ್ವಿಲ್. ಅದರ ಮೇಲ್ನೋಟದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ರಾಜ್ಯ ಜಲಸಾರಿಗೆ ಯೋಜನೆ ಜಾರಿಗೊಳಿಸಲಾಗುವುದು. ಅದರಲ್ಲಿ ಇನ್ನಷ್ಟು ಹೆಚ್ಚು ನಗರ ಪ್ರದೇಶಗಳನ್ನು ಜೋಡಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಜಲಸಾರಿಗೆ ಯೋಜನೆ ನಿರ್ಮಾಣ ಕೆಲಸಗಳನ್ನು ತ್ವರಿತ ಗತಿಯಲ್ಲಿ ನಡೆಸು ವಂತೆಯೂ ಮುಖ್ಯಮಂತ್ರಿ ನಿರ್ದೇಶ ನೀಡಿದ್ದಾರೆ. ಜಲಸಾರಿಗೆ ಯೋಜನೆ ಜಾರಿಗೊಂಡಲ್ಲಿ ಕಾಸರಗೋಡಿನಿಂದ ಕೋವಳಂ ನಗರ ಕೆಎಸ್‌ಆರ್‌ಟಿಸಿ ಬೋಟ್ ಸೇವೆ ನಡೆಸಲಾಗುವುದು. ಇದರಿಂದಾಗಿ ಕಡಿಮೆ ಸಮಯದಲ್ಲಿ ಅತ್ತಿತ್ತ ಪ್ರಯಾಣ ನಡೆಸಲು ಸಾಧ್ಯವಾಗಲಿದೆ ಮಾತ್ರವಲ್ಲ ಈ ಯೋಜನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಮೂಲಕ ಯಾತ್ರಾ ನಿಬಿಡತೆಯನ್ನು ಕುಗ್ಗಿಸುವಂತೆ ಮಾಡಲು ಸಹಾಯಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next