Advertisement

ಕೂದಲ ಆರೈಕೆಗಿರಲಿ ಹೆಚ್ಚಿನ ಕಾಳಜಿ

07:21 AM May 07, 2019 | mahesh |

ಬೇಸಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚು. ಹೀಗಾಗಿ ಈ ವೇಳೆ ಕೂದಲಿನ ಆರೈಕೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

Advertisement

ಬಿಸಿಲಿನ ಶಾಖದಿಂದ ಕೂದಲು ಉದುರುವ, ಕೂದಲಿಗೆ ಹಾನಿಯಾಗುವ ಸಂಭವ ಅಧಿಕವಾಗಿರುತ್ತದೆ. ಅತಿ ಹೆಚ್ಚು ಬೆವರು, ಧೂಳು ಕೂದಲಿನ ಬುಡದಲ್ಲಿ ಕುಳಿತು ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ಬಿಸಿಲಿಗೆ ಕೂದಲು ಒಣಗುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೀಗಾಗಿ ಬೇಸಗೆಯಲ್ಲಿ ಕೂದಲಿನ ಆರೈಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಮನೆಯಿಂದ ಹೊರಗಡೆ ಹೋಗುವಾಗ ಆದಷ್ಟು ಬಿಸಲಿನ ಶಾಖದಿಂದ ತಪ್ಪಿಸಿಕೊಳ್ಳವುದು ಉತ್ತಮ. ದಿನಕ್ಕೊಮ್ಮೆ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ.

ಕೂದಲಿನ ಆರೈಕೆಗೆ ಟಿಪ್ಸ್‌
1 ಎಣ್ಣೆ ಕೂದಲಿನ ಆರೈಕೆಗೆ ಎಣ್ಣೆ ಉತ್ತಮ ಪರಿಹಾರ.

ಇದು ಕೂದಲಿನ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೂದಲಿನ ಬುಡಕ್ಕೆ ಸರಿಯಾಗಿ ಎಣ್ಣೆ ಹಾಕಿ ಮಸಾಜ್‌ ಮಾಡುವುದುರಿಂದ ಕೂದಲಿಗೆ ಹೊಳಪು ಬರುವುದರ ಜತೆಗೆ ಕೂದಲಿಗೆ ಹಾನಿಯಾಗುವುದು ತಪ್ಪುತ್ತದೆ.

2 ನೈಸರ್ಗಿಕ ವಸ್ತುಗಳ ಬಳಕೆ
ಕೂದಲಿನ ಆರೈಕೆಗೆ ಆದಷ್ಟು ನೈಸರ್ಗಿಕ ವಸ್ತುಗಳ ಬಳಕೆ ಉತ್ತಮ. ಇದರಿಂದ ಕೂದಲಿನ ಮೇಲಾಗುವ ಹಾನಿಯಾಗುವುದನ್ನು ತಪ್ಪಿಸಬಹುದು.

Advertisement

3 ಗ್ರೀನ್‌ ಟೀಯಿಂದ ಕೂದಲಿನ ಬುಡಕ್ಕೆ ಮಸಾಜ್‌ ಮಾಡುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಒಂದು ಕಪ್‌ ನೀರಿಗೆ ಎರಡು ಬ್ಯಾಗ್‌ ಗ್ರೀನ್‌ ಟೀ ಹಾಕಿ ಆ ನೀರಿನಿಂದ ಕೂದಲಿನ ಬುಡಕ್ಕೆ ಮಸಾಜ್‌ ಮಾಡಿ.

4 ದಾಸವಾಳದ ಸೊಪ್ಪಿನ ರಸದಿಂದ ಕೂದಲಿಗೆ ಮಸಾಜ್‌ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು. ತಲೆ ತಂಪಾಗಿರುವುದು. ಬೇಸಗೆಯಲ್ಲಿ ದಾಸವಾಳವನ್ನು ನೀರಿನಲ್ಲಿ ಅರೆದು ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.

5 ಮದರಂಗಿಯು ಕೂದಲಿನ ಆರೈಕೆಗೆ ಉತ್ತಮ. ಮದರಂಗಿಯನ್ನು ಅರೆದು ಮೊಟ್ಟೆಯ ಬಿಳಿ ಭಾಗವನ್ನು ಮಿಶ್ರ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು.ಇದರಿಂದ ಕೂದಲ ರಕ್ಷಣೆ ಸಾಧ್ಯ.

ಅಲ್ಲದೇ ಕೂದಲಿನ ರಕ್ಷಣೆ, ಪೋಷಣೆಗೆ ಹೆಚ್ಚು ನೀರು ಕುಡಿಯಬೇಕು. ಧ್ಯಾನ, ಯೋಗ ಮಾಡುವುದು ಉತ್ತಮ.

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next