Advertisement

ಲಯನ್‌ ವಿಮಾನ ಪತನ: ಸಮುದ್ರದಲ್ಲಿ ತೇಲುತ್ತಿರುವ ಅಂಗಾಂಗಳು

11:23 AM Oct 30, 2018 | udayavani editorial |

ಜಕಾರ್ತಾ : 189 ಪ್ರಯಾಣಿಕರನ್ನು ಒಯ್ಯುತ್ತಿದ್ದ ವೇಳೆ ನಿನ್ನೆ ಸಮುದ್ರದಲ್ಲಿ ಪತನಗೊಂಡಿದ್ದ ಲಯನ್‌ ಏರ್‌ ಜೆಟ್‌ ವಿಮಾನ ದುರಂತದಲ್ಲಿ ಬದುಕುಳಿದಿರಬಹುದಾದ ಪ್ರಯಾಣಿಕರನ್ನು ಹುಡುಕಾಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಇಂಡೋನೇಶ್ಯದ ರಕ್ಷಣಾ ತಂಡಕ್ಕೆ ಇಂದು ಹಲವಾರು ಮೃತ ದೇಹಗಳ ಅಂಗಾಂಗಳು ಪತನ ತಾಣದಲ್ಲಿ ತೇಲುತ್ತಿದ್ದುದು ಕಂಡು ಬಂತು. 

Advertisement

ನತದೃಷ್ಟ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನವು ಯಾವುದೋ ಒಂದು ಅತೀ ಮುಖ್ಯ ಉಪಕರಣ ಕೆಟ್ಟು ಹೋದ ಕಾರಣ ದುರಂತಕ್ಕೆ ಗುರಿಯಾಗಿ ಜಾವಾ ಸಮುದ್ರದಲ್ಲಿ ಪ್ನನಗೊಂಡಿತ್ತು. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಾಕ್ಷಣ ಅದನ್ನು ಮರಳಿ ವಿಮಾನ ನಿಲ್ದಾಣಕ್ಕೆ ತರಲು ಸೂಚಿಸಲಾಗಿತ್ತು; ಆದರೆ ವಿಫ‌ಲಗೊಂಡು ಸಮುದ್ರದಲ್ಲಿ ಪತನಗೊಂಡಿತು.

ಈ ತನಕ ಸುಮಾರು 15 ಚೀಲಗಳಲ್ಲಿ ಮೃತ ದೇಹಗಳ ಭಾಗಗಳನ್ನು ತುಂಬಿಸಲಾಗಿದ್ದು ಇವುಗಳಲ್ಲಿ ಒಂದು ಮಗುವಿನ ಆಂಗಾಂಗಗಳು ಕೂಡ ಸೇರಿವೆ ಇವುಗಳನ್ನು ಜಕಾರ್ತಕ್ಕೆ ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ರಾಷ್ಟ್ರೀಯ ಡೆಪ್ಯುಟಿ ಪೊಲೀಸ್‌ ಮುಖ್ಯಸ್ಥ  ಆ್ಯರಿ ದೋನೋ ಸುಕಮಾಂತೋ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next