Advertisement

ಮೊರ್ಬಿ ಸೇತುವೆ ದುರಂತ- ಜಾಣತನ ಪ್ರದರ್ಶಿಸಬೇಡಿ;ಅಧಿಕಾರಿಗಳಿಗೆ ಗುಜರಾತ್ ಹೈಕೋರ್ಟ್ ತರಾಟೆ

03:47 PM Nov 15, 2022 | Team Udayavani |

ಅಹಮದಾಬಾದ್: ಮೊರ್ಬಿ ಸೇತುವೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ (ನವೆಂಬರ್ 15) ಮೊರ್ಬಿ ನಗರಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಭಾರತ ವಿರುದ್ಧ ಸರಣಿಗೆ ಕಿವೀಸ್ ತಂಡ ಪ್ರಕಟ: ಬೌಲ್ಟ್ – ಗಪ್ಟಿಲ್ ಗೆ ಜಾಗವಿಲ್ಲ

ಸುಮಾರು 150 ವರ್ಷಗಳ ಹಳೆಯ ಮೊರ್ಬಿ ಸೇತುವೆಯ ಪುನರ್ ನವೀಕರಣ ಕಾರ್ಯದಲ್ಲಿ ಗಂಭೀರ ಬೇಜವಾಬ್ದಾರಿತನ ಕಂಡು ಬಂದಿರುವುದಾಗಿ ಹೈಕೋರ್ಟ್ ತಿಳಿಸಿದ್ದು, ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸಬೇಡಿ, ಸಮರ್ಪಕ ಉತ್ತರ ನೀಡದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಪೀಠ ಎಚ್ಚರಿಕೆಯ ಸಂದೇಶ ರವಾನಿಸಿದೆ.

ನಗರಸಭೆ ಸಾರ್ವಜನಿಕ ಸರ್ಕಾರಿ ಸಂಸ್ಥೆಯಾಗಿದ್ದು, ನಿಮ್ಮ ಹೊಣೆಗೇಡಿತನದಿಂದಾಗಿ 135 ಜನರು ಪ್ರಾಣಕಳೆದುಕೊಳ್ಳುವಂತಾಗಿದೆ. ನಮ್ಮ ಅವಲೋಕನದ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಖುದ್ದು ಹಾಜರಿರಬೇಕು ಎಂದು ನೋಟಿಸ್ ನೀಡಿದ ಹೊರತಾಗಿಯೂ ನಗರಸಭೆಯ ಯಾರೊಬ್ಬ ಅಧಿಕಾರಿಯೂ ಬಂದಿಲ್ಲ. ನೀವು ತುಂಬಾ ಬುದ್ಧಿವಂತಿಕೆ ಪ್ರದರ್ಶಿಸುವುದು ಬೇಡ ಎಂದು ಕೋರ್ಟ್ ಚಾಟಿ ಬೀಸಿತ್ತು.

ಅಕ್ಟೋಬರ್ 30ರಂದು ಗುಜರಾತ್ ನ ಮೊರ್ಬಿ ತೂಗು ಸೇತುವೆ ಏಕಾಏಕಿ ಕುಸಿದು ಬಿದ್ದ ಪರಿಣಾಮ 130 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next