Advertisement

ಮೊರಾರ್ಜಿ ವಸತಿ ಶಾಲೆ ಲೋಕಾರ್ಪಣೆಗೆ ಸಿದ್ದ

05:26 PM Jan 18, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಇಣಚಗಲ್‌ ಗ್ರಾಮದಲ್ಲಿ ಕನಸಿನ ಶಾಲೆಯಾಗಿದ್ದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಆಂಗ್ಲ ಮಾಧ್ಯಮ ವಸತಿ ಶಾಲೆ ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿರುವುದು ಸಂತಸ ತಂದಿದೆ ಎಂದು ಮಹಾರಾಷ್ಟ್ರದ ನಿವೃತ್ತ ನ್ಯಾಯಾಧೀಶ ಜಿ.ಡಿ. ಇನಾಮದಾರ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಅಭಿನಂದಿಸಿರುವ ಅವರು, ಇಲಾಖೆಯ ಸತತ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದಾಗಿ ಅತಿ ಹಿಂದುಳಿದಿರುವ ಇಣಚಗಲ್‌ ಭಾಗಕ್ಕೆ ಈ ಶಾಲೆ ಬರುವುದು ಸಾಧ್ಯವಾಗಿದೆ. ಮಕ್ಕಳ ಕಲಿಕಾ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದಕ್ಕಾಗಿ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನಾರ್ಹರು ಎಂದು ತಿಳಿಸಿದ್ದಾರೆ.

ನಾಮಫಲಕ ಇಂಗ್ಲಿಷ್‌ನಲ್ಲಿರಲಿ

ಶಾಲೆಯ ಮುಖ್ಯ ಕಟ್ಟಡದ ಮುಂಭಾಗದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್‌ ವಿಜಯಪುರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಣಚಗಲ್‌, ತಾ| ಮುದ್ದೇಬಿಹಾಳ, ಜಿ| ವಿಜಯಪುರ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮಹತ್ವ ಕೊಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಇದು ಇಂಗ್ಲಿಷ್‌ ಮೀಡಿಯಂ ಶಾಲೆಯಾಗಿರುವುದರಿಂದ ಇಲ್ಲಿನ ಮಕ್ಕಳ ಕಲಿಕಾ ಚಟುವಟಿಕೆಯೂ ಇಂಗ್ಲಿಷ್‌ನಲ್ಲಿರುತ್ತದೆ. ಆದ್ಧರಿಂದ ಈ ಶಾಲೆಯ ನಾಮಫಲಕವನ್ನು ಇಂಗ್ಲಿಷ್‌ ನಲ್ಲಿ ಬರೆಸುವುದರಿಂದ ಮಕ್ಕಳು ಮತ್ತು ಪಾಲಕರಿಗೆ ಇಂಗ್ಲಿಷ್‌ ಮಹತ್ವವನ್ನೂ ತಿಳಿಸಿಕೊಟ್ಟಂತಾಗುತ್ತದೆ. ಇದನ್ನು ಸಲಹೆ ಎಂದು ಪರಿಗಣಿಸಿ ನಾಮಫಲಕವನ್ನು ಇಂಗ್ಲಿಷ್‌ನಲ್ಲಿ ಬರೆಸಬೇಕು. ಶಾಲಾ ಕಟ್ಟಡ ಲೋಕಾರ್ಪಣೆಗೂ ಮುನ್ನವೇ ಈ ಬದಲಾವಣೆ ಆದಲ್ಲಿ ಹೆಚ್ಚು ಮಹತ್ವ ಬರುತ್ತದೆ ಎಂದು ಅವರು ನಿರ್ದೇಶಕರಿಗೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next