ನವದೆಹಲಿ:”ನಾನು 20ನೇ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಕೆಲಸ ಮಾಡಿದ್ದೆ’. ಹೀಗೆಂದು ಹೇಳಿದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್.
ಕಳೆದ ವಾರ ಗೋವಾದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಆಕಾಶವಾಣಿಯಲ್ಲಿ “ಸಂಡೇ ರಿಕ್ವೆಸ್ಟ್’, “ಪ್ಲೇ ಇಟ್ ಕೂಲ್’, “ಡೇಟ್ ವಿತ್ ಯು’ ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆ. ಈ ಮೂಲಕ ನಾನು ರೇಡಿಯೋ ಜಾಕಿಯಾಗಿಯೂ 20ನೇ ವರ್ಷದಲ್ಲಿ ಮೂನ್‌ಲೈಟ್ ವ್ಯವಸ್ಥೆಯ ಮೂಲಕ ಕೆಲಸ ಮಾಡಿದ್ದೆ ಎಂದರು.
ನ್ಯಾಯಾಲಯದಲ್ಲಿನ ಕೆಲಸದ ಅವಧಿಯ ಬಳಿಕ ಮನೆಗೆ ತೆರಳಿದ ಬಳಿಕ ಪ್ರತಿದಿನವೂ ಸಂಗೀತವನ್ನು ಆಲಿಸುವುದಾಗಿ ಹೇಳಿದ್ದಾರೆ.
ಮೊದಲಿನಿಂದಲೂ ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಂಡಿದ್ದೆ ಎಂದಿದ್ದಾರೆ. ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿಯಲು ಪ್ರಯತ್ನಿಸಬೇಕು. ಈ ಪ್ರಯತ್ನ ಯಾವತ್ತೂ ಮುಂದುವರಿಯುವುದು ಉತ್ತಮ ಎಂದೂ ಅವರು ಕಿವಿಮಾತು ಹೇಳಿದ್ದಾರೆ.