Advertisement

ಮೂಡುಬಿದಿರೆ: ಖಾಸಗಿ ಬಸ್‌ ಪಲ್ಟಿಯಾಗಿ 18 ಮಂದಿಗೆ ಗಾಯ

09:54 AM Dec 06, 2019 | sudhir |

ಮೂಡುಬಿದಿರೆ: ಕೊಲ್ಲೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಮೂಡುಬಿದಿರೆ ಅಲಂಗಾರ್‌ಬಳಿ ಮಗುಚಿ ಬಿದ್ದು 18 ಮಂದಿಗೆ ಗಾಯಗಳಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

Advertisement

ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ. ಸಿಐ ದಿನೇಶ್‌ ಕುಮಾರ್‌ ಮತ್ತು ಸಿಬಂದಿ ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ ಗಾಂಧಿನಗರದ ಸುಮಾ ಅವರಿಗೆ ತರಚಿದ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಗೊಂಡಿರುವ ಪ್ರಯಾಣಿಕರನ್ನು ಪೊಲೀಸ್‌ ನಿರೀಕ್ಷಕ ದಿನೇಶ್‌ ಕುಮಾರ್‌ ಮತ್ತು ಸಿಬಂಧಿಗಳು ಸಹಿತ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.

ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next