Advertisement

ಮೂಡುಬಿದಿರೆ: ಉಚಿತ ಅರೋಗ್ಯ ತಪಾಸಣೆ-ಚಿಕಿತ್ಸಾ ಶಿಬಿರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ

03:48 PM May 06, 2021 | Team Udayavani |

ಮೂಡುಬಿದಿರೆ: ಕೋವಿಡ್ ಹಿನ್ನೆಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಸಾರ್ವಜನಿಕರಿಗಾಗಿ  ನಡೆಯುತ್ತಿರುವ ಉಚಿತ ಅರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ಶಿಬಿರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಆಳ್ವಾಸ್ ಹೆಲ್ತ್ ಸೆಂಟರ್ ಪ್ರವರ್ತಕ ಡಾ. ಎಂ. ಮೋಹನ ಆಳ್ವ ಅವರ ಉಪಸ್ಥಿತಿಯಲ್ಲಿ ಗುರುವಾರ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು.

Advertisement

ಡಾ.ಮೋಹನ ಆಳ್ವ ಅವರ  ಸಾಮಾಜಿಕ ಕಾಳಜಿಯನ್ನು ಪ್ರಶಂಸಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಆಸ್ಪತ್ರೆ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ನರ್ಸಿಂಗ್ ಇನ್ಸ್ಟಿಟ್ಯೂಟ್ ಹಾಗೂ ಕಾಲೇಜುಗಳ ಸಂಯುಕ್ತ ಸಹಕಾರದೊಂದಿಗೆ ಡಾ. ಆಳ್ವರು ಸಮಾಜದ ಆರೋಗ್ಯ ಚಿಂತನೆಯಿಂದ ನಡೆಸುತ್ತಿರುವ ಈ ಆರೋಗ್ಯ ಶಿಬಿರವು, ಕೋವಿಡ್ ಕುರಿತಾದ ಭಯ, ಗೊಂದಲ ನಿವಾರಿಸಿ ಕೊರೊನವನ್ನು ಸೂಕ್ತವಾಗಿ ನಿಭಾಯಿಸುವ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಕಾರ್ಯದಲ್ಲಿ ಶಾಸಕರ ಕಚೇರಿ, ಕೊರೊನಾ ವಾರ್ ರೂಂ ‌ಕಡೆಯಿಂದ, ಪುರಸಭೆಯಿಂದ ತಲಾ ಒಂದು ಲಕ್ಷ ಒದಗಿಸಲಾಗುತ್ತಿದ್ದು ಅವಶ್ಯ ಕಂಡಲ್ಲಿ ಇನ್ನಷ್ಟು ಸಂಪನ್ಮೂಲ ಒದಗಿಸಿಕೊಡಲಾಗುವುದು ಎಂದರು.

ಡಾ. ಮೋಹನ ಆಳ್ವ ಮಾತನಾಡಿ “ಕನ್ನಡ ಭವನದಲ್ಲಿ ನಡೆಯುತ್ತಿರುವ ಈ ಉಚಿತ ಆರೋಗ್ಯ ಶಿಬಿರಕ್ಕೆ ಜನತೆ ನಿಧಾನವಾಗಿಯಾದರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಶೀತ, ಕೆಮ್ಮು, ಜ್ವರ ಮತ್ತಿತರ ಅನಾರೋಗ್ಯ ಲಕ್ಷಣಗಳಿರುವವರು ನೇರ ಇಲ್ಲಿಗೆ ಬಂದು ತಪಾಸಣೆ, ಚಿಕಿತ್ಸೆ ಉಚಿತವಾಗಿ ಪಡೆಯಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಬೆಡ್ ಗಳನ್ನೂ ಹಾಕಲಾಗಿದೆ. ಅಗತ್ಯ ಬಿದ್ದರೆ ಸುಮಾರು 50 ಬೆಡ್ ಗಳ ಏರ್ಪಾಡು ಮಾಡಲೂ ಸಿದ್ಧತೆ ಮಾಡಲಾಗಿದೆ. ಸದ್ಯ ಓರ್ವ ಕೋವಿಡ್ ಪಾಸಿಟಿವ್ ರೋಗಿ ಇಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ತಪಾಸಣೆ ನಡೆಸಿದ ಬಳಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯನ್ನೂ ಮಾಡಿಸಿಕೊಳ್ಳಬಹುದು. ಜನತೆ ಯಾವುದಕ್ಕೂ ಹಿಂಜರಿಯದೆ, ಯಾವ ಗುಟ್ಟನ್ನೂ ತಮ್ಮಲ್ಲೇ ಇರಿಸಿಕೊಳ್ಳದೆ ಇಲ್ಲಿಗೆ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬಹುದು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next