Advertisement

ಮೂಡುಶೆಡ್ಡೆ ಬಿಜೆಪಿ-ಕಾಂಗ್ರೆಸ್ ಘರ್ಷಣೆ ಪ್ರಕರಣ: ನಾಲ್ವರ ಬಂಧನ

08:26 PM May 11, 2023 | Team Udayavani |

ಮಂಗಳೂರು : ಮೂಡುಶೆಡ್ಡೆಯಲ್ಲಿ ಬುಧವಾರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.

Advertisement

ಬಂಧಿತರು ಪುನಿತ್ ಶಿವನಗರ, ನಿಶಾಂತ್ ಕುಮಾರ್, ರಾಕೇಶ್ ಮತ್ತು ದಿನೇಶ್ ಕುಮಾರ್ ಶಾಲೆಪದವು ಎನ್ನುವವರಾಗಿದ್ದಾರೆ. 4 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇತರ ಭಾಗಿದಾರರನ್ನು ಗುರುತಿಸುತ್ತಿದ್ದೇವೆ. ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಮೂಡುಶೆಡ್ಡೆ ಗಲಭೆಗೆ ಕಾಂಗ್ರೆಸ್ ಅಭ್ಯರ್ಥಿಯೇ ನೇರ ಕಾರಣ : ಉಮಾನಾಥ ಕೋಟ್ಯಾನ್

ಗಲಾಟೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಪೊಲೀಸ್ ಸಿಬಂದಿಗೂ ಗಾಯಗಳಾಗಿದ್ದು, ಒಂದು ಪೊಲೀಸ್ ವಾಹನಕ್ಕೆ ಹಾನಿಯಾಗಿದೆ.

ಈ ಘಟನೆಯಲ್ಲಿ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು 5 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲು 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next